ಜನತೆಗೆ ‘ಸತ್ತು ಹೋಗಿ’ ಎಂದ ಸಚಿವ ಉಮೇಶ್ ಕತ್ತಿ ಅಧಿಕಾರದಲ್ಲಿರಲು ಅನರ್ಹ: ಕಾಂಗ್ರೆಸ್ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಜನರನ್ನು ಕೊಲೆ ಮಾಡಲೆಂದೇ ಬಿಜೆಪಿ ಬಂದಿರುವುದು. ವೈಫಲ್ಯ, ಅಯೋಗ್ಯತನದ ಜೊತೆಗೆ ಧೂರ್ತತನ, ದುರಹಂಕಾರಗಳ ಮೂಟೆ ಹೊತ್ತಿದೆ ಬಿಜೆಪಿ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ‌

ಈ ಕುರಿತು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್,
ಉದ್ಯೋಗವಿಲ್ಲದೆ, ಸಂಪಾದನೆ ಇಲ್ಲದೆ ಜನ ಹಸಿವಿನಿಂದ ಸಾಯುವ ಸ್ಥಿತಿಗೆ ಬಂದಿದ್ದಾರೆ,
ಈ ಹೊತ್ತಿನಲ್ಲಿ ಜನರ ನೆರವಿಗೆ ನಿಲ್ಲಬೇಕಾದ ರಾಜ್ಯ ಬಿಜೆಪಿ ಸರ್ಕಾರ ಸತ್ತು ಹೋಗಿ ಎನ್ನುವ ನೀಚತನಕ್ಕೆ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

“ಸತ್ತು ಹೋಗಿ” ರಾಜ್ಯ ಬಿಜೆಪಿ ಸರ್ಕಾರದ ಆಂತರ್ಯದ ಮಾತನ್ನು ಸಚಿವ ಉಮೇಶ್ ಕತ್ತಿ ಬಾಯಿ ಬಿಟ್ಟು ಹೇಳಿದ್ದಾರೆ. ಸಂಕಷ್ಟದಲ್ಲಿ, ನೋವಿನಲ್ಲಿ ನರಳುತ್ತಿರುವ ಜನತೆಗೆ “ಸತ್ತು ಹೋಗಿ” ಎನ್ನುವ ಮೂಲಕ ತಮ್ಮ ಅಯೋಗ್ಯತನವನ್ನು ಧೂರ್ತ ಮಾತುಗಳಿಂದ ಸಾಭೀತು ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ, ಜನರನ್ನು ಅವರ ಸಮಸ್ಯೆಗಳನ್ನು ಅತೀ ನೀಚ ಮಟ್ಟಕ್ಕಿಳಿದು ಅವಮಾನಿಸಿದ ಸಚಿವ ಉಮೇಶ್ ಕತ್ತಿಯ ರಾಜೀನಾಮೆ ಕೂಡಲೇ ಪಡೆಯಿರಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಆ ವ್ಯಕ್ತಿ ಒಂದು ಕ್ಷಣವೂ ಅಧಿಕಾರದಲ್ಲಿರಲು ಅನರ್ಹ.
ಜನತೆ ನೋವು, ಹತಾಶೆಯಿಂದ ಬದುಕಬೇಕೋ ಸಾಯಬೇಕೋ ಎಂದು ಕೇಳಿದರೆ. ಸಾಯುವುದನ್ನೇ ಆಯ್ಕೆ ಮಾಡಿಕೊಳ್ಳಿ ಎಂದಿದೆ ಬಿಜೆಪಿ ಸರ್ಕಾರ.
ಇಂತಹ ಅತೀ ನೀಚ ರಾಜ್ಯ ಸರ್ಕಾರದಿಂದ ರಾಜ್ಯಕ್ಕೆ ಉಳಿಗಾಲವಿಲ್ಲ. ಈ ಸರ್ಕಾರಕ್ಕೆ ಜನತೆಯನ್ನು ಸಾವಿನ ಮನೆಗೆ ಕಳಿಸುವ ಧಾವಂತವಿದೆ. ಇವರ ಆಸಕ್ತಿ ಜನತೆಯನ್ನು ಉಳಿಸುವುದಲ್ಲ, ಕಳಿಸುವುದು!
ಈ ಸರ್ಕಾರಕ್ಕೆ ಸಂವೇದನೆಯ ಲವಲೇಶವೂ ಇಲ್ಲ. ಮಂತ್ರಿಗಳದ್ದಂತೂ ಕಠೋರ ಹೃದಯ ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಯಡಿಯೂರಪ್ಪನವರೇ,ಬಡವರ ಹಸಿವನ್ನು ಹಂಗಿಸಿ ಸಾಯಲು ಹೇಳಿದ ಸಚಿವ ಉಮೇಶ್ ಕತ್ತಿಯವರ ರಾಜೀನಾಮೆ ಪಡೆದು, ಆತ್ಮಹತ್ಯಾ ಪ್ರಚೋದನೆಯ ಕೇಸ್ ದಾಖಲಿಸಿ ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು