ಜನರ ಪ್ರತಿಭಟನೆಗೆ ಕ್ಯಾರೇ ಎನ್ನಬೇಡಿ! ಅಧಿಕಾರಿಗಳೊಂದಿಗೆ ಲಕ್ಷದ್ವೀಪ ಅಡ್ಮಿನಿಸ್ಟ್ರೇಟರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕವರಟ್ಟಿ: ಜನರ ಪ್ರತಿಭಟನೆಗೆ ಕ್ಯಾರೇ ಎನ್ನಬೇಡಿ, ಕಾನೂನುಗಳನ್ನು ಜಾರಿ ಮಾಡುವತ್ತ ಮುಂದುವರಿಯಿರಿ ಎಂದು ಲಕ್ಷದ್ವೀಪ ಅಡ್ಮಿನಿಸ್ಟ್ರೇಟರ್ ಪ್ರಫುಲ್ ಪಾಟೇಲ್, ಅಧಿಕಾರಿಗಳಿಗೆ ಹೇಳಿರುವುದು ವರದಿಯಾಗಿದೆ.

ಲಕ್ಷದ್ವೀಪದಲ್ಲಿ ನೂತನವಾಗಿ ಜಾರಿಯಾಗುತ್ತಿರುವ ಕಾನೂನುಗಳ ವಿರುದ್ಧ ಲಕ್ಷದ್ವೀಪದಲ್ಲಿ ಮತ್ತು ಹೊರಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹಿನ್ನೆಲೆಯಲ್ಲಿ ಲಕ್ಷದ್ವೀಪದ ಅಡ್ಮಿನಿಸ್ಟ್ರೇಟರ್ ಪ್ರಫುಲ್ ಪಾಟೇಲ್, ಅಲ್ಲಿನ ಅಧಿಕಾರಿಗಳ ಜೊತೆಗೆ ಓನ್ಲೈನ್ ಸಭೆ ಏರ್ಪಡಿಸಿದ್ದರು. ಸಭೆಯಲ್ಲಿ ಲಕ್ಚದ್ವೀಪದ ಉನ್ನತ ಅಧಿಕಾರಿಗಳೂ ಭಾಗವಹಿಸಿದ್ದರು.

ಓನ್ಲೈನ್ ಸಭೆಯಲ್ಲಿ ಅಧಿಕಾರಗಳೊಂದಿಗೆ ಮಾತನಾಡಿದ ಪ್ರಫುಲ್ ಪಾಟೇಲ್, ನೂತನ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಶೀಘ್ರವೇ ತಣ್ಣಗಾಗಲಿದೆ. ನೀವು ಕಾನೂನುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮುಂದುವರಿಯಿರಿ ಎಂದಿದ್ದಾರೆ.

ಹೊಸ ಬದಲಾವಣೆಗಳನ್ನು ಜಾರಿಗೊಳಿಸಲು ಯಾವುದೇ ರಾಜಕೀಯ ಅಥವಾ ಕಾನೂನಾತ್ಮಕ ಅಡೆತಡೆಗಳು ಇಲ್ಲ. ಹಾಗಾಗಿ ಅವುಗಳನ್ನು ಸ್ಥಗಿತಗೊಳಿಸಬೇಕಾದ ಅಗತ್ಯವಿಲ್ಲ. ಅವುಗಳ ಕಾಲಮಿತಿಯೊಳಗೆ ಎಲ್ಲವೂ ಜಾರಿಯಾಗಲಿದೆ ಎಂದೂ ಅವರು ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬಿಜೆಪಿ ನಾಯಕ ಪ್ರಫುಲ್ ಪಾಟೇಲ್ ಲಕ್ಷದ್ವೀಪದ ಅಡ್ಮಿನಿಸ್ಟ್ರೇಟರ್ ಆಗಿ ನೇಮಕಗೊಂಡಿದ್ದರು. ಬಳಿಕ ಅಲ್ಲಿನ ಕಾನೂನುಗಳನ್ನು ತನ್ನ ಮೂಗಿನ ನೇರಕ್ಕೆ ಬದಲಾಯಿಸುತ್ತಿದ್ದಾರೆಂದು ದ್ವೀಪ ನಿವಾಸಿಗಳು ಅಸಮಾಧಾನಗೊಂಡಿದ್ದಾರೆ. ಗೋಹತ್ಯೆ ನಿಷೇಧ, ಮದ್ಯ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡುವುದು, ಸ್ಥಳೀಯರ ಮೀನುಗಾರಿಕೆ ಮತ್ತು ಹೈನುಗಾರಿಕೆಯ ಮೇಲೆ ವಿವಿಧ ನಿರ್ಬಂಧಗಳನ್ನು ಜಾರಿಗೊಳಿಸುವುದು, ಆಡಳಿತಾತ್ಮಕ ಸೇವೆಗಳಿಂದ ಸ್ಥಳೀಯರನ್ನು ದೂರವಿಡುವುದು, ಅಪರಾಧ ಚಟುವಟಿಕೆಗಳು ಕಡಿಮೆಯಿದ್ದರೂ ಗೂಂಡಾಕಾಯ್ದೆಗಳನ್ನು ಜಾರಿಗೊಳಿಸಿ ಜನರನ್ನು ಬೆದರಿಸುವುದು ಇತ್ಯಾದಿತ್ಯಾದಿಗಳ ಮೂಲಕ ಅಲ್ಲಿನ ಪರಿಸ್ಥಿತಿಯನ್ನು ಹಾಳುಗೆಡವಲು ಪ್ರಯತ್ನ ನಡೆಯುತ್ತಿದೆಯೆಂಬ ಆರೋಪವೂ ಸ್ಥಳೀಯರಿಂದ ಕೇಳಿ ಬರುತ್ತಿದೆ.

ಕಾನೂನು ಜಾರಿಯನ್ನು ವಿರೋಧಿಸಿ ಲಕ್ಷದ್ವೀಪದಾದ್ಯಂತ ಮೊದಮೊದಲು ಆನ್ಲೈನ್ ಪ್ರತಿಭಟನೆಗಳು ನಡೆಯುತ್ತಿತ್ತು. ಇದೀಗ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ಹೊರಾಂಗಣ ಪ್ರತಿಭಟನೆಗಳು ನಡೆಯಲು ತೊಡಗಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು