ಲ್ಯಾಂಡ್ ಜಿಹಾದ್| ಲವ್ ಜಿಹಾದ್ ಬೆನ್ನಲ್ಲೇ ಹೊಸ ತಗಾದೆ

'land jihad'
Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಮ್ಮು-ಕಾಶ್ಮೀರ(01-12-2020):  ರೋಶ್ನಿ ಕಾಯ್ದೆಯನ್ನು ಬಿಜೆಪಿ ‘ಲ್ಯಾಂಡ್ ಜಿಹಾದ್’ ಎಂದು ಕರೆದಿದ್ದಾರೆಂದು ಜಮ್ಮುವಿನ ಪ್ರಮುಖ ಮುಸ್ಲಿಂ ಮುಖಂಡರು ಮತ್ತು ಬುದ್ಧಿಜೀವಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಇದು ಜಮ್ಮು ಪ್ರದೇಶದ ಕೋಮು ಸೌಹಾರ್ದತೆಗೆ ಭಂಗ ತರಲು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಪ್ರಯತ್ನಗಳು ಜಮ್ಮುವಿನ ಮುಸ್ಲಿಮರನ್ನು ಶತ್ರುಗಳಂತೆ ಬಿಂಬಿಸಲಾಗುತ್ತಿದೆ ಎಂದು  ಆರೋಪಿಸಲಾಗಿದೆ.

ಜಮ್ಮು ಜಿಲ್ಲೆಯ ರೋಶ್ನಿ ಕಾಯ್ದೆಯಡಿ ಕ್ರಮಬದ್ಧಗೊಳಿಸಿದ 44,000 ಕೆನಾಲ್ ಭೂಮಿಯಲ್ಲಿ ಕೇವಲ 1,180ರಷ್ಟು ಮಾತ್ರ ಜಿಲ್ಲೆಯ ಮುಸ್ಲಿಮರ ಪರವಾಗಿ ವಿತರಿಸಲಾಗಿದೆ ಎಂದು ಅವರು ಹೇಳಿದರು. ಇಲ್ಲಿರುವ ಶಾಂತಿಯುತ ವಾತಾವರಣವನ್ನು ಕೆಲವರು ಕೆಡವಲು ಬಯಸುತ್ತಿರುವುದರಿಂದ ಜಮ್ಮು ಜನರು ಸತ್ಯವನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 31 ರಂದು ಜಮ್ಮು ಮತ್ತು ಕಾಶ್ಮೀರ ಭೂಮಿ (ಉದ್ಯೋಗಿಗಳಿಗೆ ಮಾಲೀಕತ್ವವನ್ನು ಹಸ್ತಾಂತರಿಸುವುದು) ಕಾಯ್ದೆ, ರೋಶ್ನಿ ಕಾಯ್ದೆಯನ್ನು ಶೂನ್ಯ ಮತ್ತು ಅನೂರ್ಜಿತವೆಂದು ಘೋಷಿಸಿದೆ. ಆರು ತಿಂಗಳಲ್ಲಿ ಭೂಮಿಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ.

ಡಾ. ಫಾರೂಕ್ ಅಬ್ದುಲ್ಲಾ ಆಳ್ವಿಕೆಯಲ್ಲಿ ರೋಶ್ನಿ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಪತ್ರಿಕಾಗೋಷ್ಟಿಯಲ್ಲಿ ಜಮ್ಮುವಿನಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಅಭದ್ರತೆಯ ಬಗ್ಗೆ ಅವರು ಲೆಫ್ಟಿನೆಂಟ್ ಗವರ್ನರ್ ಆಡಳಿತದ ಗಮನ ಸೆಳೆದರು. ಕೆಲವರು ರೋಶ್ನಿ ಕಾಯ್ದೆಯ ಬಗ್ಗೆ ರಾಜಕೀಯ ಮಾಡಲು ಬಯಸಿದರೆ, ಅವರು ಅದನ್ನು ಮಾಡಬೇಕು ಎಂದು ಹೇಳಿದರು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು