ಸೂಕ್ತ ಸಮಯದಲ್ಲಿ ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರಳಿ ನೀಡಲಾಗುವುದು-ಅಮಿತ್ ಶಾ

amith sha
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(13-02-2021): ಜಮ್ಮು ಮತ್ತು ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ರಾಜ್ಯತ್ವವನ್ನು ಮರಳಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಷಾ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ತಿದ್ದುಪಡಿ ಮಸೂದೆ 2021 ಕ್ಕೆ ಮತ್ತು ಈ ಪ್ರದೇಶದ ರಾಜ್ಯತ್ವಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಕೇವಲ ರಾಜಕೀಯದ ಸಲುವಾಗಿ ಇದನ್ನು ವಿರೋಧಿಸಬಾರದು ಎಂದು ಅವರು ವಿರೋಧ ಪಕ್ಷದ ಸದಸ್ಯರನ್ನು ಆಗ್ರಹಿಸಿದರು.

ಕೇಂದ್ರ ಜಮ್ಮು- ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡದಿರುವ ಬಗ್ಗೆ ಮಸೂದೆಯಲ್ಲಿ ಏನನ್ನೂ ಉಲ್ಲೇಖಿಸುವುದಿಲ್ಲ ಎಂದು ಷಾ ಪ್ರತಿಪಾದಿಸಿದರು. ಸೂಕ್ತ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ನೀಡಲಾಗುವುದು, ಎಂದು ಶಾ ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು