ಶ್ರೀನಗರ(31/2020): ಕೇಂದ್ರದ ಮೋದಿ ಸರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರ ರಾಜ್ಯದವರು ಭೂಮಿ ಖರೀದಿಸಲು ಸಾಧ್ಯವಾಗುವ ನೂತನ ಭೂ ಕಾಯ್ದೆಯನ್ನು ಪರಿಚಯಿಸಿದ ಮೂರು ದಿನಗಳಲ್ಲಿಯೇ ಇಲ್ಲಿನ ಸರ್ಕಾರ ಸುಮಾರು 3000 ಎಕರೆ ಭೂಮಿಯನ್ನು ಉದ್ಯಮ ಸ್ಥಾಪನೆ ಉದ್ದೇಶಕ್ಕಾಗಿ ಕಾಯ್ದಿರಿಸಿದೆ ಎಂದು ವರದಿಯಾಗಿದೆ.
ಈಗಾಗಲೇ ಈ ಸಂಬಂಧ ಜಮ್ಮು ಕಾಶ್ಮೀರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಭೂಮಿ ಹಸ್ತಾಂತರಿಸಲಾಗಿದೆ. ಅರಣ್ಯ ಇಲಾಖೆಯ ಸಮ್ಮತಿಯ ನಂತರ ಇಷ್ಟೇ ಪ್ರಮಾಣದ ಭೂಮಿ ಹಸ್ತಾಂತರ ಕುರಿತು ಅಧಿಸೂಚನೆ ಹೊರಬೀಳಲಿದೆ ಎನ್ನುತ್ತಾರೆ ಅಧಿಕಾರಿಗಳು.
ಕೊರೋನಾ ಹಾವಳಿಯ ನಡುವೆಯೂ 65ರಷ್ಟು ಬೃಹತ್ ಉದ್ಯಮ ಸಂಸ್ಥೆಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಉದ್ಯಮ ಚಟುವಟಿಕೆ ವಿಸ್ತರಿಸುವ ಸಂಬಂಧ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಜೊತೆಗೆ ಮಾತುಕತೆಯ ಪ್ರಯತ್ನದಲ್ಲಿದೆ ಎನ್ನಲಾಗಿದೆ.