ಮೀಲಾದ್ ಪ್ರಾರ್ಥನೆಗೆ ಮಸೀದಿಗೆ  ತೆರಳದಂತೆ ಫಾರೂಕ್​ ಅಬ್ದುಲ್ಲಾಗೆ ತಡೆ!

farook abdulla
Share on facebook
Share on twitter
Share on linkedin
Share on whatsapp
Share on telegram
Share on email
Share on print

ಶ್ರೀನಗರ(30-10-2020):  ಮೀಲಾದ್ ಪ್ರಾರ್ಥನೆಗೆ ಹಜರತ್ಬಾಲ್ ಮಸೀದಿಗೆ ಹೊರಟಿದ್ದ ನ್ಯಾಷನಲ್ ಕಾನ್ಫರೆನ್ಸ್​ ಅಧ್ಯಕ್ಷ ಫಾರೂಕ್​ ಅಬ್ದುಲ್ಲಾ ಅವರನ್ನು ಜಮ್ಮುಕಾಶ್ಮೀರದ ಆಡಳಿತ ತಡೆದಿರುವ ಘಟನೆ ನಡೆದಿದೆ.

 ಪ್ರಾರ್ಥನೆ ಮಾಡುವುದು ನಮ್ಮ ಮೂಲಭೂತ ಹಕ್ಕಾಗಿದ್ದು, ಈಗ ಅದರ ಉಲ್ಲಂಘನೆಯಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್​ ಆಕ್ರೋಶವನ್ನು ವ್ಯಕ್ತಪಡಿಸಿದೆ. ಪೀಪಲ್ಸ್​ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮುಪ್ತಿ ಕೂಡ ಜಮ್ಮು ಸರ್ವಾಧಿಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಜಮ್ಮು-ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ಈ ರೀತಿ ನಡೆದುಕೊಳ್ಳುತ್ತಿರುವುದು ಸರಿ ಅಲ್ಲ ಎಂದು ಹೇಳಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು