ಜಮಾತ್ ರಿಸರ್ಚ್ ಸೆಂಟರ್ ನಿಂದ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಂಟ್ವಾಳ: ತಾಲೂಕಿನ ಅಮ್ಮುಂಜೆ, ಕರಿಯಂಗಳ ಮತ್ತು ಬಡಗಬೆಳ್ಳೂರು ಗ್ರಾಮದ 8 ಜಮಾತ್ ಗಳ ಒಕ್ಕೂಟವಾಗಿರುವ ಜಮಾತ್ ರಿಸರ್ಚ ಸೆಂಟರ್ ಕಳೆದ 2 ವರ್ಷಗಳಿಂದ ನಿರಂತರವಾಗಿ ಸಮಾಜದಲ್ಲಿ ಕಾರ್ಯಚರಿಸುತ್ತಿದೆ. ಇದರ ಪ್ರಮುಖ ಉದ್ದೇಶ ಸಮುದಾಯವನ್ನು ಶಿಕ್ಷಿತಗೊಳಿಸದರೊಂದಿಗೆ ಉನ್ನತ ಸರ್ಕಾರಿ ಸೇವೆಗಳಲ್ಲಿ ತೊಡಗಿಸುವುದಾಗಿದೆ.

ಇದರ ಅಧೀನದಲ್ಲಿ ಆಯ್ದ 5 ಪ್ರಮುಖ ಸ್ಥಳಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ, ವೋಟರ್ ಐಡಿ ತಿದ್ದುಪಡಿ, ಲೇಬರ್ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್ ನೋಂದಾವಣಿ ಕಾರ್ಯಗಾರ ವೆಲ್ನೆಸ್ ಹೆಲ್ಪ್ ಲೈನ್ ಮಂಗಳೂರು ಇವರ ಸಹಯೋಗದೊಂದಿಗೆ ನಡೆಯಲಿದೆ.

ದಿನಾಂಕ-13-3-21 ಗುಂಡಿಗುಮೇರ್ ಜುಮಾ ಮಸೀದಿ 14-3-21 ಬಡಕಬೈಲ್ ಮಸೀದಿ, 16-3-21 ಕೊಳತ್ತಮಜಲು ಜುಮಾ ಮಸೀದಿ,20-3-21 ಅಮ್ಮುಂಜೆ ಜುಮಾ ಮಸೀದಿ ಮತ್ತು 21-3-21 ರಂದು ಕಲಾಯಿ ಜುಮಾ ಮಸೀದಿಯಲ್ಲಿ ಕಾರ್ಯಗಾರ ನಡೆಯಲಿದೆ.

ಹಾಗೂ ದಿನಾಂಕ 14-3-21 ಆದಿತ್ಯವಾರದಂದು SSLC ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ಬಡಕಬೈಲ್ ಇಮಾದ್ ಅಕಾಡೆಮಿಯಲ್ಲಿ ಖ್ಯಾತ ತರಬೇತುದಾರರಾದ ಅಬ್ದುಲ್ ರಝಾಕ್ ಅನಂತಾಡಿ ಯವರಿಂದ ನಡೆಯಲಿದೆ.

ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ ಎರಡು ಕಾರ್ಯಕ್ರಮದ ಸದುಪಯೋಗವನ್ನು ಪಡೆಯಲು ಸಮಿತಿಯ ಪಧಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು