2025 ವೇಳೆಯಲ್ಲಿ ಜಗತ್ತಿನ ಹತ್ತರಲ್ಲಿ ಆರು ಮಂದಿಗೆ ಉದ್ಯೋಗ ನಷ್ಟ | ಕಾರಣವೇನು ಗೊತ್ತೇ?

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿನೀವಾ: 2025 ವೇಳೆಯಲ್ಲಿ ಜಗತ್ತಿನ ಹತ್ತರಲ್ಲಿ ಆರು ಮಂದಿಯು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ವ ಆರ್ಥಿಕ ವೇದಿಕೆ (WEF) ಸಿದ್ಧಪಡಿಸಿದ ವರದಿ ತಿಳಿಸಿದೆ.

ಮನುಷ್ಯರು ಮತ್ತು ಯಂತ್ರಗಳು ಸಮಾನ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ತೊಡಗುವುದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ. ವಿಶ್ವದ ಹತ್ತೊಂಭತ್ತು ದೇಶಗಳ 32000 ಉದ್ಯೋಗಿಗಳ ಮೇಲೆ ನಡೆಸಲಾದ ಸಮೀಕ್ಷೆಯ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಸುಮಾರು ನಲ್ವತ್ತು ಶೇಕಡಾ ಮಂದಿಯು ಇನ್ನೊಂದು ಐದು ವರ್ಷಗಳಲ್ಲಿ ತಮ್ಮ ಉದ್ಯೋಗವು ನಷ್ಟಗೊಳ್ಳಬಹುದೆಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಐವತ್ತಾರು ಶೇಕಡಾ ಜನರು ಭವಿಷ್ಯದಲ್ಲಿ ಸಣ್ಣ ಪ್ರಮಾಣದ ಜನರಷ್ಟೇ ಧೀರ್ಘಾವಧಿಯ ಉದ್ಯೋಗವನ್ನು ಪಡೆಯುವ ಅದೃಷ್ಟವನ್ನು ಹೊಂದಲಿದ್ದಾರೆ ಎಂದೇ ಭಾವಿಸಿಕೊಂಡಿದ್ದಾರೆ. ಅದೇ ವೇಳೆ ಅರುವತ್ತು ಶೇಕಡಾಕ್ಕಿಂತಲೂ ಹೆಚ್ಚು ಮಂದಿ ತಮ್ಮ ಉದ್ಯೋಗಗಳನ್ನು ಸಂರಕ್ಷಿಸುವ ಹೊಣೆಯನ್ನು ಸರಕಾರವೇ ವಹಿಸಬೇಕೆಂದು ಬಯಸುತ್ತಿದ್ದಾರೆ.

ಸಮೀಕ್ಷೆಯ ಪ್ರಕಾರ, ನಲ್ವತ್ತು ಶೇಕಡಾ ಉದ್ಯೋಗಿಗಳು 2020 ಕೋವಿಡ್ ಲಾಕ್ಡೌನ್ ಸಮಯವನ್ನು ತಮ್ಮ ಡಿಜಿಟಲ್ ನೈಪುಣ್ಯತೆಯನ್ನು ಗಳಿಸಲು ಸದುಪಯೋಗ ಪಡಿಸಿಕೊಂಡರೆ, ಎಪ್ಪತ್ತೇಳು ಶೇಕಡಾ ಜನರು ಹೊಸ ನೈಪುಣ್ಯತೆಯನ್ನು ಗಳಿಸಲು ಅಥವಾ ಪುನರ್ ತರಬೇತಿ ಪಡೆಯಲು ಸಿದ್ಧಗೊಂಡಿದ್ದಾರೆ. ಮತ್ತು ಎಂಭತ್ತು ಶೇಕಡಾ ಮಂದಿಯು ಹೊಸ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳುವ ಆತ್ಮವಿಶ್ವಾಸವನ್ನು ಗಳಿಸಿದ್ದಾರೆ.

ಡಬ್ಲೂಇಎಫ್ ಮೊದಲ ವರದಿಯ ಪ್ರಕಾರ ಯಂತ್ರಗಳ ಮೇಲಿನ ಅವಲಂಬನೆ ಮತ್ತು ಕೃತಕ ಬುದ್ಧಿಮತ್ತೆಯ ಕಾರಣದಿಂದಾಗಿ 85 ಮಿಲಿಯನ್ ಉದ್ಯೋಗವು ಕಳೆದುಕೊಳ್ಳುವ ಭೀತಿಯಿರುವುದಾದರೂ, 97 ಮಿಲಿಯನ್ ಹೊಸ ಉದ್ಯೋಗವು ಸೃಷ್ಠಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು