ಇಟಲಿಯಲ್ಲಿ ಮತ್ತೆ ತಾಂಡವವಾಡುತ್ತಿರುವ ಕೊರೋನಾ ಭೀತಿ | ಜನತೆಗೆ ಎಚ್ಚರಿಕೆ ನೀಡಿದ ಪ್ರಧಾನಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ರೋಮ್ : ಯುರೋಪ್ ರಾಷ್ಟ್ರವಾದ ಇಟಲಿಯಲ್ಲಿ ಕೊರೋನ ಸೋಂಕು ಪ್ರಕರಣಗಳು ಏಕಾಏಕಿ ಹೆಚ್ಚಿದ ಕಾರಣ ದೇಶಾದ್ಯಂತ ಅಂಗಡಿಗಳು, ರೆಸ್ಟೋರೆಂಟ್ ಮತ್ತು ಶಾಲೆಗಳನ್ನು ಮುಚ್ಚಲಾಗುವುದು ಎಂದು ಸಂಬಂಧಪಟ್ಟ ಇಟಲಿಯನ್ ಅಧಿಕಾರಿಗಳು ಶುಕ್ರವಾರ ಪ್ರಕಟಿಸಿದ್ದಾರೆ.

ಸೋಮವಾರ,ಈಸ್ಟರ್, ಏಪ್ರಿಲ್ 3-5ರಂದು ಮೂರು ದಿನಗಳವರೆಗೆ, ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿಯಾಗಲಿದೆ. ಒಂದು ವರ್ಷದ ಹಿಂದೆ ಮೊದಲ ರಾಷ್ಟ್ರೀಯ ಲಾಕ್‌ಡೌನ್‌ ಜಾರಿ ಮಾಡಿದ್ದ ಇಟಲಿ ಮತ್ತು ಕರೋನ ಸೋಂಕಿನಿಂದ ಹೆಚ್ಚು ಹಾನಿಗೊಳಗಾದ ದೇಶಗಳಲ್ಲಿ ಒಂದಾಗಿತ್ತು.

ಆದರೆ ಈಗ ಸೋಂಕು ಪ್ರಕರಣಗಳು ಮತ್ತೆ ತೀವ್ರವಾಗಿ ಹರಡುತ್ತಿದ್ದು ಪ್ರಧಾನಿ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಇದು ಯುಕೆ ನಂತರ ಯುರೋಪಿನ ಎರಡನೇ ಅತಿ ಹೆಚ್ಚು ಕೊರೋನ ಸಂಬಂಧಿತ ಸಾವಿನ ಪ್ರಕರಣ ವರದಿಯಾಗಿದೆ. ಕಳೆದ ವಾರ ರೋಮಿನಲ್ಲಿ ಸರ್ಕಾರ ಲಸಿಕೆಗಳ ಕೊರತೆ ಪರಿಹರಿಸಲು 250,000 ಡೋಸ್ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯನ್ನು ಆಸ್ಟ್ರೇಲಿಯಾಕ್ಕೆ ರಫ್ತು ಮಾಡುವುದನ್ನು ನಿರ್ಬಂಧಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು