ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ಎಸ್ ಸೋಮನಾಥ್ ಅವರು ನೇಮಕಗೊಂಡಿದ್ದಾರೆ.
ಇಸ್ರೋದ ಮಾಜಿ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರವದಿ ಮುಕ್ತಾಯಗೊಂಡ ಬಳಿಕ ವಿಜ್ಞಾನಿ ಎಸ್ ಸೋಮನಾಥ್ ನೇಮಕಗೊಂಡಿದ್ದಾರೆ.
ಚಂದ್ರಯಾನ-2, GSAT-9 ಸೇರಿದಂತೆ ಹಲವಾರು ಯೋಜನೆಯಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಸೋಮನಾಥ್ ಅವರನ್ನು ರಾಕೆಟ್ ವಿಜ್ಞಾನಿ ಎಂದು ಕರೆಯಲಾಗಿದೆ.