70 ದಿನಗಳಿಂದ ಇಸ್ರೇಲ್ ಜೈಲಿನಲ್ಲಿ ಉಪವಾಸ ಮಾಡುತ್ತಿರುವ ಫೆಲೆಸ್ತೀನ್ ಖೈದಿ

isreal
Share on facebook
Share on twitter
Share on linkedin
Share on whatsapp
Share on telegram
Share on email
Share on print

ಇಸ್ರೇಲ್ (09-10-2020): ಇಸ್ರೇಲ್ ಸರಕಾರವು ಜೈಲಿನಲ್ಲಿರಿಸಿದ ಫೆಲೆಸ್ತೀನ್ ಖೈದಿಯ ಉಪವಾಸ ಸತ್ಯಾಗ್ರಹವು  70ದಿನಗಳು ಕಳೆದಿದೆ. ಜುಲೈ ತಿಂಗಳಲ್ಲಿ ಜೆನಿನ್ ನಗರದಿಂದ ಮಾಹಿರ್ ಅಲ್ ಅಕ್ರಸನ್ನು ಇಸ್ರೇಲ್ ಬಂಧಿಸಿತ್ತು.

ಕಳೆದ ಎರಡು ತಿಂಗಳಿಗಿಂತಲೂ ಹೆಚ್ಚು ಕಾಲ ಅನ್ನ ಆಹಾರ ಸೇವಿಸದೇ ನಿತ್ರಾಣಗೊಂಡಿರುವ ಇವರನ್ನು ಇಸ್ರೇಲ್ ಮೆಡಿಕಲ್ ಸೆಂಟರಿಗೆ ಸೇರಿಸಲಾಗಿದೆ. ಇದೀಗ ಅವರ ವೀಡಿಯೋ ತುಣುಕೊಂದು ಹೊರಬಿದ್ದಿದ್ದು, ನಾನು ಯಾವ ಕ್ಷಣದಲ್ಲಿ ಬೇಕಾದರೂ ಸಾಯಬಹುದು. ಇಸ್ರೇಲ್ ಸರಕಾರ ಎಸಗಿದ ಅನ್ಯಾಯದಿಂದಾಗಿ ನಾನು ಕೊಲೆಗೀಡಾಗಲಿರುವೆನೆಂದು ಮಹಿರ್ ಅಲ್ ಅಕ್ರಸ್ ಆ ವೀಡಿಯೋದಲ್ಲಿ ಹೇಳಿದ್ದಾರೆ.

ಮಾಹಿರ್ ಅಲ್ ಅಕ್ರಸ್ ಮೇಲೆ ಯಾವುದೇ ಆರೋಪಗಳನ್ನು ಹೊರಿಸದೇ ,ವಿಚಾರಣೆಯೂ ನಡೆಸದೇ ಜೈಲಿನಲ್ಲಿ ಕೂಡಿ ಹಾಕಲಾಗಿದ್ದು, ಬಿಡುಗಡೆಗಾಗಿ ಯಾವುದೇ ಸಾಧ್ಯತೆಗಳಿಲ್ಲವೆಂದು ಕಂಡುಬಂದಾಗ ಇಸ್ರೇಲ್ ಸರಕಾರದ ವಿರುದ್ಧ ಜೈಲಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು