ಜೆರುಸಲೇಂ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬೆತ್ತಲೆ ರೂಪದ ಪ್ರತಿಮೆಯು ಟೆಲ್ ಹವೀವ್ – ಹಬೀಮಾ ಸ್ಕ್ವಾರ್ ಬಳಿ ಪ್ರತ್ಯಕ್ಷಗೊಂಡಿದೆ ಎಂದು ಜೆರುಸಲೇಂ ಪೋಸ್ಟ್ ವರದಿ ಮಾಡಿದೆ.
ವರದಿ ಪ್ರಕಾರ ‘ ಐದು ಮೀಟರ್ ಎತ್ತರ ಮತ್ತು ಆರು ಟನ್ ತೂಕವನ್ನು ಬೆತ್ತಲೆ ಪ್ರತಿಮೆಯು ಹೊಂದಿದೆ.
ಪ್ರತಿಮೆಯ ಹಿಂದಿರುವ ಕಲಾವಿದ ಇನ್ನೂ ಯಾರೆಂದು ತಿಳಿದಿಲ್ಲ.
ನಂತರ ಈ ಪ್ರತಿಮೆಯನ್ನು ಟೆಲ್ ಅವೀವ್ ಪುರಸಭೆ ತನಿಖಾಧಿಕಾರಿಗಳು ತೆಗೆದುಹಾಕಿದ್ದಾರೆ.
ಮುಂದಿನವಾರ ಇಸ್ರೇಲ್ ಚುನಾವಣೆಯ ಬಿರುಸಿನ ತಯಾರಿಯಲ್ಲಿರುವ ಬೆಂಜಮಿನ್ ಅವರ ವಿರೋಧಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.