ಇಸ್ರೇಲಿಗರು ಯುಎಇಗೂ, ಯುಎಇಯನ್ನರು ಇಸ್ರೇಲಿಗೂ ಪ್ರಯಾಣಿಸಲು ಇನ್ನು ಮುಂದೆ ವೀಸಾದ ಅಗತ್ಯವಿಲ್ಲ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಟೆಲ್ ಅವಿವ್(20-10-2020): ಇಸ್ರೇಲೀ ಪ್ರಜೆಗಳು ಯುಎಇಗೆ ಪ್ರಯಾಣಿಸಲು ಮತ್ತು ಯುಎಇ ಪ್ರಜೆಗಳು ಇಸ್ರೇಲಿಗೆ ಪ್ರಯಾಣಿಸಲು ಇನ್ನು ಮುಂದೆ ವೀಸಾದ ಅಗತ್ಯ ಬರುವುದಿಲ್ಲ. ಇಂತಹ ಒಂದು ಒಪ್ಪಂದ ಎರಡೂ ದೇಶಗಳ ನಡುವೆ ನಡೆದಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಬಹಿರಂಗಪಡಿಸಿದ್ದಾರೆ.

ಇಸ್ರೇಲಿಗೆ ಆಗಮಿಸಿದ ಯುಎಇಯ ಪ್ರಥಮ ವಿಮಾನದಲ್ಲಿದ್ದ ರಾಜತಾಂತ್ರಿಕ ಪ್ರತಿನಿಧಿಗಳನ್ನು ಸ್ವಾಗತಿಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಎರಡೂ ದೇಶಗಳು ಸೇರಿ ವಾಣಿಜ್ಯ, ತಂತ್ರಜ್ಞಾನ ಮತ್ತು ವೈಮಾನಿಕ ಕ್ಷೇತ್ರಗಳಲ್ಲಿ ನಾಲ್ಕು ಬಹುಮುಖ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಅದೂ ಅಲ್ಲದೇ ಇಸ್ರೇಲ್, ಅಮೇರಿಕಾ ಮತ್ತು ಯುಎಇ ಜೊತೆಗೂಡಿ “ಅಬ್ರಹಾಂ ಫಂಡ್” ಎಂಬ ಉದ್ಯಮ ನಿಧಿಯನ್ನೂ ಸ್ಥಾಪಿಸಲಾಗಿದೆ. ಪರಸ್ಪರ ದೇಶಗಳ ನಡುವೆ ವ್ಯಾಪಾರ ವಹಿವಾಟುಗಳನ್ನು ಬಲಪಡಿಸಲು ಮತ್ತು ಪ್ರಾದೇಶಿಕ ಸಹಕಾರವನ್ನು ಸುಗಮಗೊಳಿಸಲು ಇದನ್ನು ಬಳಸಲಾಗುವುದೆಂದು ನಿರೀಕ್ಷಿಸಲಾಗಿದೆ. ಇದು ದೊಡ್ಡ ಬದಲಾವಣೆಗೆ ಕಾರಣವಾಗಲಿದೆಯೆಂದು ನೆತನ್ಯಾಹು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚಿಗೆ ಕೊಲ್ಲಿ ದೇಶಗಳಾದ ಯುಎಇ ಮತ್ತು ಬಹ್ರೇನ್ ಇಸ್ರೇಲ್ ಜೊತೆಗೆ ಸಹಜ ಸಂಬಂಧ ಸ್ಥಾಪಿಸಲು ಮುಂದಾಗಿದ್ದು, ವ್ಯಾಪಾರ ವಹಿವಾಟುಗಳಿಗೆ ಹೊಸ ಮಾರುಕಟ್ಟೆಗಳು ತೆರೆದುಕೊಂಡಿರುವುದಲ್ಲದೇ ಪ್ರದೇಶದಲ್ಲಿ ಇರಾನ್ ವಿರೋಧಿ ಪಾಳಯವೂ ಹೊಸದಾಗಿ ರೂಪುಗೊಂಡಂತಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು