ಇಸ್ರೇಲ್ – ಫೆಲೆಸ್ತೀನ್ ನಡುವೆ ಯುದ್ಧ ವಿರಾಮ ಘೋಷಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿರುಸೆಲಮ್: ಇಸ್ರೇಲ್ಫೆಲೆಸ್ತೀನ್ ನಡುವೆ ಯುದ್ಧ ವಿರಾಮ ಏರ್ಪಟ್ಟಿದೆ. ಹಲವು ಜೀವಗಳನ್ನು ಬಲಿ ಪಡೆದ ಹನ್ನೊಂದು ದಿನಗಳಿಂದ ನಡೆಯುತ್ತಿರುವ ಕ್ರೂರ ಯುದ್ಧವು ಕೊನೆಗೂ ನಿಂತಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಭೇರಿ ಮೂಲಗಳು ಫೆಲೆಸ್ತೀನಿಯರೊಂದಿಗಿನ ಯುದ್ಧ ವಿರಾಮವನ್ನು ಅಧಿಕೃತವಾಗಿ ಘೋಷಿಸಿತು. ಹಮಸ್ ಮತ್ತು ಇಸ್ಲಾಮಿಕ್ ಜಿಹಾದ್ ಸೇನೆಯು ಕೂಡಾ ಇದನ್ನು ದೃಢೀಕರಿಸಿದೆ. ಇದೊಂದು ದ್ವಿಪಕ್ಷೀಯ ಮತ್ತು ಏಕಕಾಲಿಕ ಯುದ್ಧ ವಿರಾಮವೆಂದು ಹೇಳಿದೆ.

ಇಸ್ರೇಲಿನ ವೈಮಾನಿಕ ದಾಳಿಗೆ ಒಟ್ಟು 232 ಫೆಲೆಸ್ತೀನಿಯರು ಬಲಿಯಾಗಿದ್ದಾರೆ. ಅದರಲ್ಲಿ 65 ಮಕ್ಕಳು ಮತ್ತು 39 ಮಹಿಳೆಯರು ಸೇರಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಸ್ರೇಲಿನ 12 ಮಂದಿ ಬಲಿಯಾಗಿದ್ದು, ಅದರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. 90,000 ಕ್ಕೂ ಅಧಿಕ ಮಂದಿ ಫೆಲೆಸ್ತೀನಿಯರು ತಮ್ಮ ನಿವಾಸಗಳಿಂದ ದೂರ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಯುದ್ಧ ವಿರಾಮ ಘೋಷಣೆಯು ಗಾಝಾ ನಿವಾಸಿಗಳ ಪಾಲಿಗೆ ಶುಭ ಸುದ್ಧಿಯಾಗಿದೆ. ಆದರೆ ತಡ ರಾತ್ರಿ ಎರಡು ಗಂಟೆಯ ಹೊತ್ತಿಗೆ ಯುದ್ಧ ವಿರಾಮವು ಅಧಿಕೃತವಾಗಿ ಜಾರಿಗೆ ಬರಲಿದ್ದು, ಇದಕ್ಕೂ ಮೊದಲು ಇಸ್ರೇಲ್ ವೈಮಾನಿಕ ಕಾರ್ಯಾಚರಣೆ ನಡೆಸಲಿದೆಯೇ ಎಂಬ ಬಗ್ಗೆ ಅಲ್ಲಿನ ಜನಸಾಮಾನ್ಯರು ಆತಂಕ್ಕೀಡಾಗಿದ್ದಾರೆ.

ಯುದ್ಧ ವಿರಾಮ ಘೋಷಣೆ ಮಾಡುವ ಈಜಿಪ್ಟ್ ಶ್ರಮಕ್ಕೆ ಇಸ್ರೇಲಿನ ರಕ್ಷಣಾ ಸಚಿವಾಲಯವು ಧನಾತ್ಮಕ ಪ್ರತಿಕ್ರಿಯೆ ನೀಡಿದೆ. ಸಂಪುಟದಲ್ಲಿ ಯುದ್ಧ ವಿರಾಮ ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಯುದ್ಧ ವಿರಾಮ ಏರ್ಪಟ್ಟಿರುವುದನ್ನು ಶ್ಲಾಘಿಸಿ, ವಿಶ್ವಾದ್ಯಂತ ಹಲವು ಗಣ್ಯರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು