ಮುಗಿಲು ಮುಟ್ಟಿದ ಫೆಲೆಸ್ತೀನಿಯನ್ನರ ಸಂಭ್ರಮ | ವಿಜಯೋತ್ಸವ ಆಚರಿಸುತ್ತಿರುವವರ ಮೇಲೆ ಟಿಯರ್ ಗ್ಯಾಸ್ ಪ್ರಯೋಗ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿರುಸೆಲಮ್: ಹನ್ನೊಂದು ದಿನಗಳ ಇಸ್ರಾಯೀಲ್ಫೆಲಸ್ತೀನ್ ಸಂಘರ್ಷವು ಏಕಾಏಕಿ ಯುದ್ಧ ವಿರಾಮ ಘೋಷಣೆಯೊಂದಿಗೆ ಮುಕ್ತಾಯಗೊಂಡಿದೆ. ಇಸ್ರೇಲ್ ಭದ್ರತಾ ಸಂಪುಟವೂ ಆದಷ್ಟು ಬೇಗ ಯುದ್ಧ ವಿರಾಮ ಜಾರಿಗೆ ಬರುವಂತೆ ಸರ್ವಾನುಮತದಿಂದ ಅಂಗೀಕರಿಸಿದೆ.

ದ್ವಿಪಕ್ಷೀಯ ಸಮ್ಮತಿಯೊಂದಿಗೆ ಘೋಷಣೆಯಾದ ಯುದ್ಧ ವಿರಾಮದ ಬಳಿಕ ಫೆಲೆಸ್ತೀನ್ ಜನರು ತಮ್ಮ ದೇಶದಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಹಮಸ್ ಕೂಡಾ ಇದು ತನ್ನ ವಿಜಯವೆಂದು ಬಣ್ಣಿಸಿದೆ.

ನಡುವೆ ಇಂದು ಶುಕ್ರವಾರದ ಜುಮಾ ನಮಾಜು ಬಳಿಕ ಅಲ್ಅಖ್ಸಾ  ಮಸೀದಿಯಲ್ಲಿ ಸೇರಿದ ಸಾವಿರಾರು ಫೆಲೆಸ್ತೀನಿಯರು ತಮ್ಮ ದೇಶದ ದ್ವಜ ಹಿಡಿದು, ‘ವಿಸಂಕೇತವನ್ನು ಪ್ರದರ್ಶಿಸುತ್ತಾ ಗೆಲುವಿನ ಸಂಭ್ರಮವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಯುದ್ಧದ ಕಾರಣದಿಂದ ತಪ್ಪಿಹೋದ ಈದ್ ಸಂಭ್ರಮವನ್ನು ಗೆಲುವಿನಲ್ಲಿ ಕಂಡುಕೊಂಡರು.

ವಿಜಯೋತ್ಸವ ಸಂಭ್ರಮವಿದ್ದ ಅಲ್ಅಖ್ಸಾ ಮಸೀದಿ ವಠಾರಕ್ಕೆ ದಾಳಿ ಮಾಡಿದ ಇಸ್ರಾಯೀಲ್ ಪೋಲೀಸರು ಸಂಭ್ರಮಾರಣೆಯಲ್ಲಿದ್ದ ಅರಬ್ ವಂಶಜರ ಮೇಲೆ ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಪ್ರಯೋಗಿಸಿ ಚದುರಿಸಲು ಪ್ರಯತ್ನಿಸಿದ್ದಾರೆಂದು ವರದಿಯಾಗಿದೆ.

ಇಸ್ರಾಯೀಲ್ಫೆಲೆಸ್ತೀನ್ ನಡುವೆ ಯುದ್ಧ ವಿರಾಮ ಮೂಡಿಸುವ ಈಜಿಪ್ಟ್ ಸರಕಾರದ ಶ್ರಮವು ಸುಲಭದಲ್ಲಿ ಯಶಸ್ವಿಯಾಗಿದೆ. ಆದರೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಯುದ್ಧ ವಿರಾಮದ ಬಳಿಕ ಪ್ರತಿಕ್ರಿಯೆ ನೀಡಿದ್ದ ಹಮಸ್, ಇದೊಂದು ದ್ವಿಪಕ್ಷೀಯ ಮತ್ತು ತಾತ್ಕಾಲಿಕ ಯುದ್ಧ ವಿರಾಮವಾಗಿದ್ದು, ಇಸ್ರೇಲಿನಿಂದ ಎದುರಾಗುವ ಆಕ್ರಮಣದ ವಿರುದ್ಧ ಯಾವತ್ತೂ ತಾನು ಸನ್ನದ್ಧವಾಗಿರುವೆನೆಂದು ಹೇಳಿದೆ. ಇಸ್ರೇಲ್ ಕೂಡಾ ಹಮಸಿನಿಂದ ರಾಕೆಟ್ ದಾಳಿ ನಡೆದರೆ, ಹೊಸ ರೀತಿಯ ಕಾರ್ಯಾಚರಣೆಗೆ ಮುಂದಡಿಯಿಡುವುದಾಗಿ ಬೆದರಿಕೆ ಹಾಕಿದೆ.

ವಿವಾದದ ಕಿಡಿಯನ್ನು ಹೊತ್ತಿಸಿ, ಎರಡು ದೇಶಗಳ ನಡವೆ ಯುದ್ಧಕ್ಕೆ ಕಾರಣವಾಗಿದ್ದ ಅಲ್ಅಖ್ಸಾ ಮಸೀದಿಯಲ್ಲಿನ ಇಸ್ರಾಯೀಲೀ ಪೋಲೀಸರ ಕಾರ್ಯಾಚರಣೆಯು ಪುನರಾವರ್ತನೆಯಾದ ಹಿನ್ನೆಲೆಯಲ್ಲಿ ಹೊಸ ಸಂಘರ್ಷದ ಸಾಧ್ಯತೆಯಿದೆಯೆಂದು ಆತಂಕ ವ್ಯಕ್ತವಾಗಿದೆ.

ಇಸ್ರಾಯೀಲ್ ವೈಮಾನಿಕ ದಾಳಿಯಿಂದ ಫೆಲೆಸ್ತೀನಿನ 66 ಮಕ್ಕಳು, 40 ರಷ್ಟು ಮಹಿಳೆಯರು ಸೇರಿದಂತೆ ಒಟ್ಟು 243 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಧ್ವಂಸವಾದ ಕಟ್ಟಡಗಳ ಅಡಿಯಿಂದ ಹೊಸದಾಗಿ ಮೃತದೇಹಗಳು ದೊರಕುತ್ತಿವೆ. ಸಂಘರ್ಷದಲ್ಲಿ ಇಸ್ರೇಲಿನ 2 ಮಕ್ಕಳು ಸೇರಿ 12 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಶಾಂತಿಯುತ ವಾತಾವರಣದಲ್ಲಿದ್ದ ಪ್ರದೇಶವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹದೆಗೆಡಿಸಿದ್ದಾರೆಂಬ ಆರೋಪವು ಜಾಗತಿಕವಾಗಿ ಕೇಳಿ ಬರುತ್ತಿದೆಇತ್ತೀಚೆಗೆ ಇಸ್ರೇಲಿನಲ್ಲಿ ನಡೆದ ಮತದಾನದಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಗದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ವರುಷಗಳ ಹಿಂದೆ ನೆರೆಯ ಲೆಬನಾನಿನ ಹಿಜ್ಬುಲ್ಲಾಹ್ ಗುಂಪಿನ ವಿರುದ್ಧ ಯುದ್ಧ ಸಾರಿದ್ದ ಇಸ್ರೇಲ್, ಆಗಲೂ ಯುದ್ಧ ಕಣದಿಂದ ಏಕಾಏಕಿ ಹಿಂದೆ ಸರಿದಿರಿರುವುದನ್ನು ಸದ್ಯದ ಯುದ್ಧ ವಿರಾಮದ ಹಿನ್ನೆಲೆಯಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು