ಇಸ್ರೇಲಿಗೆ ಇರಾನಿನಿಂದ ತಿರುಗೇಟು? ಯುಎಇ ಸಮೀಪ ಇಸ್ರೇಲೀ ಹಡಗಿನ ಮೇಲೆ ಆಕ್ರಮಣ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದುಬೈ: ಯುಎಇ ಫುಜೈರಾ ಬಂದರಿನ ಸಮೀಪದಲ್ಲಿದ್ದ ಇಸ್ರೇಲಿನ ಹಡಗೊಂದರ ಮೇಲೆ ದಾಳಿಯಾಗಿದೆಯೆಂದು ಇಸ್ರೇಲೀ ಮಾಧ್ಯಮಗಳು ವರದಿ ಮಾಡಿದೆ. ಇದು ಇರಾನ್ ನಡೆಸಿರುವುದೆಂದು ಇಸ್ರೇಲ್ ಆರೋಪಿಸಿದೆ.

ಇರಾನಿನ ನತಾನ್ಝ್ ಅಣು ಸ್ಥಾವರದಲ್ಲಿ ಸ್ಪೋಟವೊಂದು ಉಂಟಾಗಿತ್ತಲ್ಲದೇ, ಇಸ್ರೇಲ್ ಇದರ ಹೊಣೆಯನ್ನೂ ಹೊತ್ತುಕೊಂಡಿತ್ತು. ಬಳಿಕ ಪ್ರತಿಕ್ರಿಯೆ ನೀಡಿದ ಇರಾನ್, ಸ್ಪೋಟಕ್ಕೆ ಪ್ರತಿಕಾರ ತೀರಿಸುತ್ತೇವೆಂದು ಶಪಥ ಮಾಡಿತ್ತು.

ಹಡಗಿನ ಮೇಲೆ ನಡೆದ ದಾಳಿಯಲ್ಲಿ ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ. ಹಡಗು ಭಾಗಶಃ ಜಖಂಗೊಂಡಿದೆ. ಮಾನವ ರಹಿತ ಡ್ರೋನ್ ಅಥವಾ ಮಿಸೈಲ್ ಬಳಸಿ ಆಕ್ರಮಣ ಮಾಡಿರಬಹುದೆಂದು ಅಂತಾರಾಷ್ಟ್ರೀಯ ಮಾಧ್ಯಮಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿವೆ.

ಕುವೈತಿನಿಂದ ಬಂದಿರುವ ಇಸ್ರೇಲೀ ಮಾಲಕತ್ವದ ಈ ಹಡಗು ಯುಎಇಯ ಫುಜೈರ ಬಂದರಿನತ್ತ ಕಾರುಗಳನ್ನು ಹೊತ್ತು ಸಾಗುತ್ತಿತ್ತು. ದಾಳಿ ಕುರಿತು ಯುಎಇ ಯು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು