ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಹತ್ಯೆಯ ವಿರುದ್ಧ ವಿಶ್ವಾದ್ಯಂತ ಭುಗಿಲೆದ್ದ ಆಕ್ರೋಶ | ಭಾರತದ ಕಾಶ್ಮೀರ ಸೇರಿದಂತೆ ಹಲವೆಡೆ ಫೆಲೆಸ್ತೀನ್ ಬೆಂಬಲಿಸಿ ಸಮಾವೇಶಗಳು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜೆರುಸೆಲೆಮ್: ಒಂದು ವಾರದಿಂದ ಫೆಲೆಸ್ತೀನಿನ ಮೇಲೆ ಇಸ್ರೇಲಿನ ಸತತ ಆಕ್ರಮಣದ ವಿರುದ್ಧ ವಿಶ್ವಾದ್ಯಂತ ಆಕ್ರೋಶವು ಭುಗಿಲೆದ್ದಿದೆ. ಫೆಲಸ್ತೀನಿಗೆ ಬೆಂಬಲವಾಗಿ ಬೃಹತ್ ಸಮಾವೇಶಗಳು ಜರುಗುತ್ತಿವೆ.

ಯುರೋಪಿಯನ್ ದೇಶಗಳಾದ ಬ್ರಿಟನ್, ಅಮೇರಿಕಾ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಸ್ಪೈನ್ ಗಳಲ್ಲಿ ಪ್ರತಿಭಟನಾ ಸಮಾವೇಶಗಳು ಕಂಡು ಬಂದಿದೆ. ಇರಾಕಿನಲ್ಲೂ ಹಲವಾರು ಕಡೆಗಳಲ್ಲಿ ಜನರು ಒಟ್ಟು ಗೂಡಿ, ಇಸ್ರೇಲ್ ವಿರುದ್ಧ ಧ್ವನಿಯೆತ್ತಿದ್ದಾರೆ. ಕತರ್ , ಲೆಬನಾನ್, ಜೋರ್ಡಾನ್, ತುನೇಸಿಯಾ, ಅರ್ಜೈಂಟೈನಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾಗಳಲ್ಲೂ ಪ್ರತಿಭಟನೆಗಳು ಕಂಡು ಬಂದಿದೆ.

ಭಾರತದ ಕಾಶ್ಮೀರದಲ್ಲೂ ಫೆಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ ನಡೆದಿದೆ. ಕಾಶ್ಮೀರದ ಶ್ರೀನಗರದಲ್ಲಿ ಪ್ರತಿಭಟನೆ ನಡೆದಿದ್ದು, ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯ ಇಪ್ಪತ್ತು ಜನರನ್ನು ಬಂಧಿಸಲಾಗಿದೆಯೆಂಬ ವರದಿಯಿದೆ.

ಫೆಲೆಸ್ತೀನಿನ ಮೇಲೆ ಇಸ್ರೇಲ್ ಆಕ್ರಮಣಕ್ಕೆ ಬಲಿಯಾದವರ ಸಂಖ್ಯೆ 145 ಕ್ಕೇರಿದ್ದು, ಅದರಲ್ಲಿ 49 ಮಕ್ಕಳೂ ಒಳಗೊಂಡಿದ್ದಾರೆ. 2000 ಕ್ಕೂ ಹೆಚ್ಚು ಜನರು ಗಾಯ ಗೊಂಡಿದ್ದಾರೆ. ಹತ್ತು ಸಾವಿರ ಜನರು ಕುಟುಂಬ ಸಮೇತರಾಗಿ ದೂರದೂರುಗಳಿಗೆ ವಲಸೆ ಹೋಗಿದ್ದಾರೆ.

ನಿನ್ನೆಯಷ್ಟೇ ನಿರಾಶ್ರಿತ ಶಿಬಿರವನ್ನು ಗುರಿಯಾಗಿರಿಸಿಯೂ ಇಸ್ರೇಲ್ ದಾಳಿ ನಡೆಸಿ, ಹಲವರನ್ನು ಬಲಿ ಪಡೆದಿತ್ತು. ಜಾಗತಿಕ ಮಾಧ್ಯಮಗಳ ಕಛೇರಿಯಿರುವ ಕಟ್ಟಡಗಳನ್ನೂ ಬಾಂಬ್ ಸುರಿಸಿ ಧ್ವಂಸಗೊಳಿಸಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು