ಈಶ್ವರಪ್ಪನವರಿಗೆ ಸಂಪುಟದಿಂದ ಹೊರದಬ್ಬಿ ನಿಮ್ಮ ತಾಕತ್ತು ಪ್ರದರ್ಶಿಸಿ : ಬಿಎಸ್ ವೈಗೆ ಕಾಂಗ್ರೆಸ್ ಒತ್ತಾಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೆ.ಎಸ್‌.ಈಶ್ವರಪ್ಪನವರೇ ಗುಲಾಮರಂತೆ ಸಚಿವರಾಗಿರುವುದಕ್ಕಿಂತ, ರಾಜೀನಾಮೆ ಕೊಟ್ಟು ಸ್ವಾಭಿಮಾನ ಪ್ರದರ್ಶಿಸಿ ಎಂದು ಸಚಿವ ಈಶ್ವರಪ್ಪನವರಿಗೆ ಕಾಂಗ್ರೆಸ್ ಆಗ್ರಹಿಸಿದೆ.

ಈ ಕುರಿತು ಸರಣಿ ಟ್ವೀಟ್ ಮುಂದುವರಿಸಿದ ಕಾಂಗ್ರೆಸ್
“ಬಿ.ಎಸ್.ಯಡಿಯೂರಪ್ಪನವರೇ,ಯತ್ನಾಳ್‌ರ ವಿರುದ್ಧ ಕ್ರಮ ಕೈಗೊಳ್ಳದೆ ಕೈಲಾಗದ ಸಿಎಂ ಎನಿಸಿಕೊಂಡಿದ್ದೀರಿ, ಈಶ್ವರಪ್ಪನವರನ್ನಾದರೂ ಸಂಪುಟದಿಂದ ಹೊರದಬ್ಬಿ ನಿಮ್ಮ ತಾಕತ್ತು ಪ್ರದರ್ಶಿಸಿ! ಇದಾಗುವುದಿಲ್ಲವೆಂದರೆ ನೆಟ್ಟಗೆ ಆಡಳಿತ ನಡೆಸಿಕೊಂಡು ಹೋಗಿ” ಎಂದು ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದೆ.

ಪಕ್ಷದ ಅಧ್ಯಕ್ಷ, ಉಸ್ತುವಾರಿ, ಕಾರ್ಯದರ್ಶಿ ಸರ್ಕಾರದ ಚಟುವಟಿಕೆಗಳಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದರೆ ಏನರ್ಥ? ಬಿಜೆಪಿಯೊಳಗೆ ಕೆಜೆಪಿ ಇನ್ನೂ ಜೀವಂತವಾಗಿದೆ ಎಂದರ್ಥವೇ? ಯತ್ನಾಳ್‌ರನ್ನು ನಿಯಂತ್ರಿಸದೆ ಮಜಾ ನೋಡಿಕೊಂಡು ಬಿಟ್ಟಿದ್ದು ಏಕೆಂದು ಈಗ ಸ್ಪಷ್ಟವಾಗುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆರೋಪಿದೆ.

“ಬಿಎಸ್ ವೈ ಮುಕ್ತ ಬಿಜೆಪಿ” ಅಭಿಯಾನ ವೇಗ ಪಡೆದುಕೊಳ್ಳುತ್ತಿದೆ! ಪ್ರತಿ ಇವಿಎಂ ಕೆಟ್ಟಾಗಲೂ ಅದು ಬಿಜೆಪಿ ಬಟನ್ ಪರವಾಗಿಯೇ ಕೆಲಸ ಮಾಡುತ್ತಿರುತ್ತದೆ! ಪ್ರತಿ ಬಾರಿ ಇವಿಎಂ ಸಾಗಿಸುವಾಗ ಸಿಕ್ಕಿಬೀಳುವ ವಾಹನ ಬಿಜೆಪಿಯದ್ದೇ ಆಗಿರುತ್ತದೆ!
ಪ್ರತಿ ಬಾರಿ ಚುನಾವಣಾ ವಾಹನ ಕೆಟ್ಟು ನಿಂತಾಗಲೂ ಬಿಜೆಪಿ ವಾಹನವೇ ಸಹಾಯಕ್ಕೆ ಬರುತ್ತದೆ!
“ಕಾಕತಾಳೀಯ” ಎಂಬ ಪದವೂ ಕೂಡ ಒಂದು ಪಕ್ಷದ ಪರವಾಗಿರುವುದು ಕಾಕತಾಳಿಯವೇ! ಎಂದು ಕಾಂಗ್ರೆಸ್ ತನ್ನ ಸರಣಿ ಟ್ವೀಟ್ ಮೂಲಕ ಬಿಜೆಪಿಯನ್ನು ಟೀಕಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು