ಇಸ್ರೋ ಮತ್ತೊಂದು ಮೈಲಿಗಲ್ಲು: ಅಮೆಜಾನಿಯಾ-1 ಸೇರಿ 19 ಉಪಗ್ರಹಗಳ ಯಶಸ್ವಿ ಉಡಾವಣೆ

ishro
Share on facebook
Share on twitter
Share on linkedin
Share on whatsapp
Share on telegram
Share on email
Share on print

ಶ್ರೀಹರಿಕೋಟ(28-02-2021):  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬ್ರೆಜಿಲ್‍ನಲ್ಲಿ ನಿರ್ಮಿತ ಅಮೆಜಾನಿಯಾ-1 ಸೇರಿ 19 ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಂದು ಬ್ರೆಜಿಲ್‍ನ ಅಮೆಜಾನಿಯಾ-1 ಉಪಗ್ರಹವನ್ನು ಪಿಎಸ್‍ಎಲ್‍ವಿ ಸಿ-51 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾಯಿಸಲಾಗಿದೆ.

ಅಮೆಜಾನಿಯಾ-1  ವಾಣಿಜ್ಯ ಉಪಗ್ರಹವಾಗಿದ್ದು, ಕೇಂದ್ರ ಸರ್ಕಾರಿ ಸ್ವಾಮ್ಯದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‍ಎಸ್‍ಐಎಲ್) ಅಮೆರಿಕದ ಸ್ಪೇಸ್ ಫ್ಲೈಟ್ ಇಂಚ್ ಜತೆ ಒಪ್ಪಂದದನ್ವಯ ಈ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಈ ಉಪಗ್ರಹ ಭೂಮಂಡಲವನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಬಲ್ಲ ತಂತ್ರಜ್ಞಾನ ಹೊಂದಿದೆ. ಕೃಷಿ ಮತ್ತು ಪರಿಸರ ಬದಲಾವಣೆಗಳ ಕುರಿತಂತೆ ಸೂಕ್ಷ್ಮವಾಗಿ ರಿಮೋಟ್ ಸೆನ್ಸಿಂಗ್ ಡೇಟಾಗಳನ್ನು ರವಾನೆ ಮಾಡಲಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು