ಐರ್ಲೆಂಡ್ ಸರಕಾರದಿಂದ ಫೆಲೆಸ್ತೀನಿಯನ್ನರಿಗೆ 1.5 ದಶಲಕ್ಷ ಯುರೋಗಳ ತುರ್ತು ಸಹಾಯ | ಮುಂದುವರಿದ ಐರ್ಲೆಂಡ್-ಫೆಲೆಸ್ತೀನ್ ಬಾಂಧವ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಡಬ್ಲಿನ್: ಐರ್ಲೆಂಡ್ ಸರಕಾರವು ಇಸ್ರೇಲ್ ಅತಿಕ್ರಮಣದಿಂದ ನಷ್ಟವನ್ನನುಭವಿಸಿದ ಫೆಲೆಸ್ತೀನಿಯನ್ ಜನರಿಗೆ 1.5 ದಶಲಕ್ಷ ಯುರೋಗಳ ತುರ್ತು ಸಹಾಯವನ್ನು ಒದಗಿಸಿದೆ.

ಫೆಲೆಸ್ತೀನಿನ ಗಾಝಾ ಪಟ್ಟಿಯಲ್ಲಿರುವ ಜನರು ಈ ಮೊದಲೇ ಬಡತನ, ಆಹಾರದ ಅಭಾವ ಮುಂತಾದ ಕ್ಲಿಷ್ಠಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇದೀಗ ಇನ್ನೊಂದು ಸುತ್ತಿನ ದೌರ್ಜನ್ಯದ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಭೀಕರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿರುವ ಪ್ರಸ್ತುತ ಅತಿಕ್ರಮಣಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ.” ಎಂದು ನೆರವು ಘೋಷಣೆಯ ವೇಳೆಯಲ್ಲಿ ಐರ್ಲೆಂಡ್ ವಿದೇಶಾಂಗ ಸಚಿವ ಸಿಮೋನ್ ಕವೆನೆ ಹೇಳಿದ್ದಾರೆ.

ಐರ್ಲೆಂಡ್ ಒಂದು ದಶಲಕ್ಷ ಯುರೋವನ್ನು ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಾಚರಣಾ ಇಲಾಖೆ (UNFWA) ಯ ಮೂಲಕ ನೀಡಲಿದ್ದು, ಅದು ಫೆಲೆಸ್ತೀನ್ ನಿರಾಶ್ರಿತರಿಗೆ ಆಹಾರ, ನೀರು, ನಿರ್ಮಲೀಕರಣ, ಆರೋಗ್ಯ ಮುಂತಾದ ಕೆಲಸಕಾರ್ಯಗಳಿಗಾಗಿ ವಿನಿಯೋಗಿಸಲಿದೆ. ಇನ್ನುಳಿದ ಐದು ಲಕ್ಷ ಯುರೋವನ್ನು ಯುನಿಸೆಫ್ (UNICEF) ಮೂಲಕ ಯುದ್ಧಗಳಿಂದ ಗಾಯಾಳುಗಳಾದ ಮಕ್ಕಳ ಕಲ್ಯಾಣಕ್ಕಾಗಿ ವಿನಿಯೋಗಿಸಲಿದೆ.

ಇಸ್ರೇಲ್ ರಾಷ್ಟ್ರ ಸ್ಥಾಪನೆಯ ಸಮಯದಲ್ಲಿ ಐರ್ಲೆಂಡ್ ದೇಶವು ಇಸ್ರೇಲ್ ಪರವಾಗಿತ್ತಾದರೂ ನಂತರದ ದಿನಗಳಲ್ಲಿ ಫೆಲೆಸ್ತೀನ್ ಬೆಂಬಲಿಗ ದೇಶವಾಗಿ ಬದಲಾಗಿದೆ. 1949 ರಲ್ಲಿ ಐರ್ಲೆಂಡ್ ದೇಶವು ಬ್ರಿಟನ್ನಿಂದ ಸ್ವತಂತ್ರಗೊಂಡಿತ್ತು. ತನ್ನದೇ ಭಾಗವಾದ ಉತ್ತರ ಐರ್ಲೆಂಡ್ ಈಗಲೂ ಬ್ರಿಟೀಷರ ವಶದಲ್ಲಿದೆ. ಇದನ್ನು ಮರಳಿ ಪಡೆಯುವ ಐರ್ಲೆಂಡ್ ಐಕ್ಯತಾ ಆಂದೋಲನವು ಈಗಲೂ ಐರ್ಲೆಂಡಿನಲ್ಲಿ ಜೀವಂತವಾಗಿದೆ.

ಐರ್ಲೆಂಡ್ ಜನರು ಬ್ರಿಟೀಷರಿಂದ ಅನುಭವಿಸಿದ ದಬ್ಬಾಳಿಕೆ ಮತ್ತು ಉತ್ತರ ಐರ್ಲೆಂಡ್ ಪ್ರದೇಶವು ಇನ್ನೂ ಬ್ರಿಟೀಷರ ವಶದಲ್ಲಿರುವುದು ಕೂಡಾ ದೌರ್ಜನ್ಯಕ್ಕೊಳಗಾಗುತ್ತಿರುವ ಫೆಲೆಸ್ತೀನ್ ಜನರನ್ನು ಭಾವನಾತ್ಮಕವಾಗಿ ಹತ್ತಿರಗೊಳಿಸುವಂತೆ ಮಾಡಿದೆ. ಇಸ್ರಾಯೀಲ್ ಸೈನ್ಯವು ಫೆಲೆಸ್ತೀನಿಯರ ಮೇಲೆ ಆಕ್ರಮಣ ಮಾಡಿದ ಸಮಯದಲ್ಲಿ ಐರ್ಲೆಂಡಿನಾದ್ಯಂತ ಪ್ರತಿಭಟನಾ ಸಭೆಗಳು ನಡೆದಿತ್ತು. ಫೆಲೆಸ್ತೀನಿಯರನ್ನು ಬೆಂಬಲಿಸಿ, ಇಸ್ರಾಯೀಲ್ ರಾಯಭಾರಿ ಕಛೇರಿಯ ಕಡೆಗೂ ಸಾವಿರಾರು ಮಂದಿ ಮಾರ್ಚ್ ನಡೆಸಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು