ವಿಜ್ಞಾನಿ ಮೊಹ್ಸೆನ್‌ ಹತ್ಯೆಯ ಹಿಂದೆ ಇಸ್ರೇಲ್! ಪರಮಾಣು ಯೋಜನೆ ಪ್ರಾರಂಭಿಸಿದ ಬಳಿಕ  ಹಲವು ಇರಾನ್ ವಿಜ್ಞಾನಿಗಳ ನಿಗೂಢ ಹತ್ಯೆ ನಡೆದಿತ್ತು!

iran scientist
Share on facebook
Share on twitter
Share on linkedin
Share on whatsapp
Share on telegram
Share on email
Share on print

ಟೆಹರಾನ್‌ (28-11-2020):  ಇರಾನಿನ ಪರಮೋಚ್ಚ ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಅವರ ಹತ್ಯೆಯನ್ನು ಇಸ್ರೇಲ್ ಮಾಡಿದ ಎಂದು ಇರಾನ್ ಆರೋಪಿಸಿದೆ.

ಇರಾನ್‌ನ ಅಧ್ಯಕ್ಷ ಹಸನ್‌ ರೌಹಾನಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ವಿಜ್ಞಾನಿಯ ಹತ್ಯೆಗೆ ನಾವು ಸಮಯಬಂದಾಗ ತಕ್ಕ  ಉತ್ತರ ಕೊಡುತ್ತೇವೆ. ಫಖ್ರಿಜಾದೆಹ್‌ ಅವರ ಹತ್ಯೆಯಿಂದ ಪರಮಾಣು ಯೋಜನೆಯು ಸ್ಥಗಿತಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಅವರು ಪ್ರತಿಕ್ರಿಯಿಸಿ, ಪರಮಾಣು ಯೋಜನೆ ಪ್ರಾರಂಭಿಸಿದ ಬಳಿಕ ಹಲವು ವಿಜ್ಞಾನಿಗಳ ಹತ್ಯೆಯಾಗಿದೆ. ಇದರಂತೆಯೇ ಫಖ್ರಿಜಾದೆಹ್‌ ಅವರ ಹತ್ಯೆ ನಡೆದಿದೆ. ಇದರ ಹಿಂದೆ ಇಸ್ರೇಲ್ ಕೈವಾಡ ಇದೆ. ಯಾರನ್ನೂ ಬಿಡಲ್ಲ ಎಂದು ಹೇಳಿದ್ದಾರೆ.

ಸೇನಾ ಪರಮಾಣು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಅವರ ಕಾರನ್ನು ಗುರಿಯಾಗಿರಿಸಿಕೊಂಡು ದುಷ್ಕರ್ಮಿಗಳು ನಿನ್ನೆ ದಾಳಿ ನಡೆಸಿದ್ದರು. ಆ ವೇಳೆ ಮೋಹ್ಸೆನ್ ಅವರ ಭದ್ರತಾ ಸಿಬ್ಬಂದಿ ಮತ್ತು ದಾಳಿಕೋರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆತ್ತು. ಗುಂಡೇಟಿನಿಂದ ಮೋಹ್ಸೆನ್ ತೀವ್ರವಾಗಿ ಗಾಯಗೊಂಡಿದ್ದರು.ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು  ಮೃತಪಟ್ಟಿದ್ದರು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು