ಭೋಪಾಲ್(30-10- 2020): ಒಂದು ತಿಂಗಳ ಹಿಂದೆ ಮಧ್ಯಪ್ರದೇಶದ ಹಿರಿಯ ಐಪಿಎಸ್ ಅಧಿಕಾರಿ ಪುರುಷೋತ್ತಂ ಶರ್ಮಾ ಅವರು ಪತ್ನಿಯನ್ನು ಥಳಿಸಿ ಹಲ್ಲೆ ಮಾಡಿದ್ದಾರೆ ಎಂಬ ಆಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ವೈರಲ್ ಆಗಿತ್ತು. ಈಗ ಕೇಂದ್ರ ಗೃಹ ಸಚಿವಾಲಯ (ಎಂಎಚ್ಎ) ಅವರ ಅಮಾನತು ಎತ್ತಿಹಿಡಿದಿದೆ ಮತ್ತು ನವೆಂಬರ್ 27 ರೊಳಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವಿಶೇಷವೆಂದರೆ, ಮಧ್ಯಪ್ರದೇಶ ರಾಜ್ಯ ಸರ್ಕಾರವು ಶರ್ಮಾ ಅವರನ್ನು ವಿಶೇಷ ನಿರ್ದೇಶಕ-ಜನರಲ್ ಹುದ್ದೆಯಿಂದ ಸೆಪ್ಟೆಂಬರ್ 29 ರಂದು ಅಮಾನತುಗೊಳಿಸಿತ್ತು. ಅವರ ಅಮಾನತು ರದ್ದುಪಡಿಸಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಅವರ ಮನವಿಗೆ ಸರಕಾರದಿಂದ ಸ್ಪಂದನೆ ಸಿಗಲಿಲ್ಲ.
ವಿಶೇಷ ಪೊಲೀಸ್ ಮಹಾನಿರ್ದೇಶಕರು (ಮಧ್ಯಪ್ರದೇಶ) ಪುರುಷೋತ್ತಮ್ ಶರ್ಮಾ ಅವರ ಪತ್ನಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಇರುವುದು ರೆಡ್ ಹ್ಯಾಂಡ್ ಆಗಿ ಹಿಡಿದಾಗ ಈ ಘಟನೆ ನಡೆದಿದೆ. ಇದು ದಂಪತಿಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು, ಅದರ ನಂತರ ಶರ್ಮಾ ತನ್ನ ಹೆಂಡತಿಯನ್ನು ನೆಲದ ಮೇಲೆ ಎಳೆದುಕೊಂಡು ಹೋಗಿ ಥಳಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿತ್ತು.