ಬೆಂಗಳೂರು(06-02-2021): ಮಹಿಳಾ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಾರೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವರ್ತಿಕಾ ಕಟಿಯಾರ್ ತಮ್ಮ ಪತಿ ಐಎಫ್ ಎಸ್ ಅಧಿಕಾರಿ ನಿತಿನ್ ಸುಭಾಷ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. ನಿತಿನ್ ಸೇರಿದಂತೆ 7 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ವರ್ತಿಕಾ ಅವರಿಗೆ 2011ರಲ್ಲಿ ನಿತಿನ್ ಜೊತೆ ಮದುವೆಯಾಗಿತ್ತು. ಪತಿ ವರದಕ್ಷಿಣೆಗಾಗಿ ಕಿರುಕುಳ ಮತ್ತು ದೈಹಿಕ ದೌರ್ಜನ್ಯವನ್ನೂ ನೀಡುತ್ತಿದ್ದಾರೆ ಎಂದು ವರ್ತಿಕಾ ಕೇಸ್ ದಾಖಲಿಸಿದ್ದಾರೆ.