ಐಪಿಎಲ್ ಹರಾಜು 2022: ಮಾರಾಟವಾಗದೆ  ಉಳಿದ ಪ್ರಮುಖ ಆಟಗಾರರು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಐಪಿಎಲ್  ಹರಾಜು 2022 ಸಾಕಷ್ಟು ಅಚ್ಚರಿಗಳು ಕಂಡುಬಂದವು. ಇಶಾನ್ ಕಿಶನ್ ಐಪಿಎಲ್ ಹರಾಜಿನ 2022 ರ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದು, ವಿಕೆಟ್ ಕೀಪರ್-ಬ್ಯಾಟರ್‌ ಮುಂಬೈ ಇಂಡಿಯನ್ಸ್ ಗೆ  15.25 ಕೋಟಿ ರೂ.ಗೆ  ಹರಾಜಾದರು.  ಒಟ್ಟು 204 ಆಟಗಾರರು ಮಾರಾಟವಾಗಿದ್ದು, 10 ಫ್ರಾಂಚೈಸಿಗಳಿಂದ 551.70 ಕೋಟಿ ರೂ. ಹೂಡಿಕೆಯಾಗಿದೆ.  ಆದಾಗ್ಯೂ, ಕೆಲವು ಪ್ರಮುಖ ಆಟಗಾರರು  ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಅವರ ವಿವರ ಹೀಗಿದೆ.

*ಸುರೇಶ್ ರೈನಾ (ಮೂಲ ಬೆಲೆ 2 ಕೋಟಿ ರೂ.): ಎಡಗೈ ಆಟಗಾರ ರೈನಾ ಐಪಿಎಲ್‌ನಲ್ಲಿ ಸಾರ್ವಕಾಲಿಕ ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಅವರ ನಂತರ 4ನೇ  ಸ್ಥಾನದಲ್ಲಿದ್ದಾರೆ. ರೈನಾ 205 ಪಂದ್ಯಗಳನ್ನು ಆಡಿದ್ದಾರೆ.  32.51 ಸರಾಸರಿಯಲ್ಲಿ 5,528 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾಗಿಂತ ಉತ್ತಮ ಸರಾಸರಿಯನ್ನು ಹೊಂದಿದ್ದಾರೆ. ಮೂಲ ಬೆಲೆ ರೂ 2 ಕೋಟಿ ಹೊಂದಿದ್ದ ಅವರು  2021 ರ ಋತುವಿನಲ್ಲಿ 12 ಪಂದ್ಯಗಳಲ್ಲಿ 17.77 ರ ಅಲ್ಪ ಸರಾಸರಿಯಲ್ಲಿ ಕೇವಲ 160 ರನ್ ಗಳನ್ನು ಗಳಿಸಿದ್ದರು.
ಸ್ಟೀವ್ ಸ್ಮಿತ್ (ಮೂಲ ಬೆಲೆ 2 ಕೋಟಿ ರೂ.): ಆಸ್ಟ್ರೇಲಿಯನ್ ರನ್-ಮೆಷಿನ್ ಆಶ್ಚರ್ಯಕರವಾಗಿ ಐಪಿಎಲ್ ಹರಾಜು 2022 ರಲ್ಲಿ ಯಾವುದೇ ತಂಡಕ್ಕೆ ಹರಾಜಾಗದೆ ಉಳಿದರು. ಅವರು 2021ರಲ್ಲಿ ದಿಲ್ಲಿ ಕ್ಯಾಪಿಟಲ್ಸ್‌ಗಾಗಿ ಎಂಟು ಪಂದ್ಯಗಳಲ್ಲಿ 25.33 ಸರಾಸರಿ ಹಾಗೂ  112.59 ಸ್ಟ್ರೈಕ್ ರೇಟ್‌ನಲ್ಲಿ 152 ರನ್ ಗಳಿಸಿದ್ದರು.
ಶಾಕೀಬ್ ಅಲ್ ಹಸನ್ (ಮೂಲ ಬೆಲೆ 2 ಕೋಟಿ ರೂ.): ಬಾಂಗ್ಲಾದೇಶದ ಹಸನ್  ಐಸಿಸಿಯ ಆಲ್‌ರೌಂಡರ್‌ಗಳಿಗಾಗಿ ಏಕದಿನ ಕ್ರಿಕೆಟ್  ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಹಾಗೂ ಐಸಿಸಿ ಟ್ವೆಂಟಿ-20 ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದಾಗ್ಯೂ, ಬ್ಯಾಟ್ ಹಾಗೂ  ಬಾಲ್ ಎರಡರಲ್ಲೂ ಪರಾಕ್ರಮ ಸಾಮರ್ಥ್ಯ ಹೊರತಾಗಿಯೂ ಯಾವುದೇ ತಂಡವು ಶಾಕೀಬ್‌ಗೆ ಬಿಡ್ ಮಾಡಲಿಲ್ಲ.
ಐಪಿಎಲ್ -2021 ರಲ್ಲಿಕೆಕೆಆರ್ ಪರ ಆಡಿದ್ದ ಶಾಕೀಬ್ ಎಂಟು ಪಂದ್ಯಗಳಲ್ಲಿ ಕೇವಲ 47 ರನ್ ಗಳಿಸಿದ್ದರು ಹಾಗೂ  ಕೇವಲ ನಾಲ್ಕು ವಿಕೆಟ್ ಗಳಿಸುವಲ್ಲಿ ಯಶಸ್ವಿಯಾದರು.
ಆದಿಲ್ ರಶೀದ್ (ಮೂಲ ಬೆಲೆ ರೂ 2 ಕೋಟಿ): ಇಂಗ್ಲೆಂಡ್  ಲೆಗ್-ಸ್ಪಿನ್ನರ್  ಪ್ರಸ್ತುತ ಟ್ವೆಂಟಿ-20 ಸ್ವರೂಪದಲ್ಲಿ ಅಗ್ರ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಐಸಿಸಿಯ ಟಿ-20 ಆಟಗಾರರ ಶ್ರೇಯಾಂಕದಲ್ಲಿ ಆದಿಲ್ ರಶೀದ್ ಮೂರನೇ ಸ್ಥಾನದಲ್ಲಿದ್ದಾರೆ.
ಇಮ್ರಾನ್ ತಾಹಿರ್ (ಮೂಲ ಬೆಲೆ 2 ಕೋಟಿ ರೂ.): ದಕ್ಷಿಣ ಆಫ್ರಿಕಾದ ಅನುಭವಿ ಸ್ಪಿನ್ನರ್‌ಗೆ ಈಗ 42 ವರ್ಷ ಹಾಗೂ  ಅವರ ಮೂಲ ಬೆಲೆ 2 ಕೋಟಿ ರೂ. ಆಗಿರುವುದು  ಹರಾಜಿನಲ್ಲಿ ಅವರನ್ನು ಯಾರೂ  ಖರೀದಿಸದಿರಲು ಕಾರಣವಾಗಿರಬಹುದು. ಕಳೆದ  ವರ್ಷ ಕೂಡ ತಾಹಿರ್ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಕೇವಲ ಒಂದೇ  ಪಂದ್ಯವನ್ನು ಆಡುವ ಅವಕಾಶವನ್ನು ಪಡೆದಿದ್ದರು, ಇದರಲ್ಲಿ ಅವರು 4 ರ ಎಕಾನಮಿ ದರದಲ್ಲಿ ಎರಡು ವಿಕೆಟ್ ಪಡೆದಿದ್ದರು.
ಆ್ಯರೊನ್ ಫಿಂಚ್ (ಮೂಲ ಬೆಲೆ ರೂ 1.50 ಕೋಟಿ): ಆಸ್ಟ್ರೇಲಿಯನ್ ಸೀಮಿತ ಓವರ್ ಗಳ ಕ್ರಿಕೆಟ್  ನಾಯಕ ಐಪಿಎಲ್‌ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.  ಆದರೆ ಸ್ಥಿರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿರಲಿಲ್ಲ. ಫಿಂಚ್ ಅವರು 2020 ರಲ್ಲಿ ಆರ್ ಸಿಬಿ ಗಾಗಿ ಆಡಿದ್ದರು.  ಅಲ್ಲಿ ಅವರು 12 ಪಂದ್ಯಗಳಲ್ಲಿ 268 ರನ್ ಗಳಿಸಿದರು. ಆದರೆ ಅವರು ಐಪಿಎಲ್ 2021 ಹರಾಜಿನ ಮೊದಲು ಬಿಡುಗಡೆಯಾದರು. ಅಲ್ಲಿ ಅವರು ಮಾರಾಟವಾಗಲಿಲ್ಲ.
ಡೇವಿಡ್ ಮಲಾನ್ (ಮೂಲ ಬೆಲೆ ರೂ 1.50 ಕೋಟಿ): ಐಸಿಸಿ ಶ್ರೇಯಾಂಕದ ಪ್ರಕಾರ  ಟಿ-20 ಗಳಲ್ಲಿ ಇಂಗ್ಲೆಂಡಿನ ಮಲಾನ್  ಅಗ್ರ ಬ್ಯಾಟರ್ ಆಗಿದ್ದರು.  ಆದರೆ ಪ್ರಸ್ತುತ ಐಸಿಸಿ ಯ ಟಿ-20 ಶ್ರೇಯಾಂಕದಲ್ಲಿ 5 ನೇ ಸ್ಥಾನದಲ್ಲಿದ್ದಾರೆ. ಅವರು ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಸೇರಿದ್ದರು.  ಆದರೆ ಅವರು ಆಡಿದ್ದ ಕೇವಲ ಒಂದು ಪಂದ್ಯದಲ್ಲಿ 26 ರನ್ ಗಳಿಸಿದ್ದರು.
ಇಯಾನ್ ಮಾರ್ಗನ್ (ಮೂಲ ಬೆಲೆ ರೂ 1.50 ಕೋಟಿ): ಇಂಗ್ಲೆಂಡ್ ಸೀಮಿತ ಓವರ್ ಕ್ರಿಕೆಟ್  ನಾಯಕ ಮೊರ್ಗನ್ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಐಪಿಎಲ್ 2021 ರಲ್ಲಿ ಫೈನಲ್‌ಗೆ ತಲುಪಿಸಿದ್ದರು, ಅಲ್ಲಿ ಕೆಕೆಆರ್ ತಂಡವು  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲುಂಡಿತು.ಆದರೆ ಮೋರ್ಗನ್ ಸ್ವತಃ ಕಳಪೆ ಬ್ಯಾಟಿಂಗ್ ಮಾಡಿದ್ದರು. ಎಡಗೈ ಆಟಗಾರ 17 ಪಂದ್ಯಗಳಲ್ಲಿ ಕೇವಲ 133 ರನ್ ಗಳಿಸಿದ್ದರು.
ಕ್ರಿಸ್ ಲಿನ್ (ಮೂಲ ಬೆಲೆ ರೂ 1.50 ಕೋಟಿ): ಆಸ್ಟ್ರೇಲಿಯಾದ ಅತ್ಯಂತ ಪ್ರಮುಖ  ಹಿಟ್ಟರ್‌ಗಳಲ್ಲಿ ಒಬ್ಬರಾದ ಲಿನ್ ಐಪಿಎಲ್ 2021 ರ ಸೀಸನ್‌ಗೆ ಮುಂಚಿತವಾಗಿ ರೂ 2 ಕೋಟಿಗೆ ಅವರ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಅವರನ್ನು ತೆಗೆದುಕೊಂಡಿತು.  ಆದರೆ ಕೇವಲ ಒಂದು ಪಂದ್ಯವನ್ನು ಆಡಲು ಸಿಕ್ಕಿತು. ಆದಾಗ್ಯೂ, ಅವರು 140 ರ ಸ್ಟ್ರೈಕ್ ರೇಟ್‌ನಲ್ಲಿ 49 ರನ್ ಗಳಿಸುವಲ್ಲಿ ಶಕ್ತರಾದರು.
ತಬ್ರೈಝ್  ಶಮ್ಸಿ (ಮೂಲ ಬೆಲೆ ರೂ 1 ಕೋಟಿ): ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಭಾರತದ ವಿರುದ್ಧದ ಏಕದಿನ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಏನೆಂದು ತೋರಿಸಿದ್ದರು. ಟಿ-20 ಸ್ವರೂಪದಲ್ಲಿ, ಶಮ್ಸಿ ಎರಡನೇ ಶ್ರೇಯಾಂಕದ ಬೌಲರ್.  ಆದರೆ ತಂಡಗಳು ಅವರಲ್ಲಿ ಶೂನ್ಯ ಆಸಕ್ತಿಯನ್ನು ತೋರಿಸಿದವು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು