ಅಂತರ್​ಧರ್ಮೀಯ ವಿವಾಹ ನಿಷೇಧಕ್ಕೆ ಕಠಿಣ ಕಾನೂನು!

shivarajsingh
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಧ್ಯಪ್ರದೇಶ(03-11- 2020): ಅಂತರ್​ಧರ್ಮೀಯ ವಿವಾಹಗಳನ್ನು ತಡೆಯಲು ಸೂಕ್ತ ಕಾನೂನನ್ನು ಜಾರಿಗೆ ತರಲು ಮಧ್ಯಪ್ರದೇಶ ಸರಕಾರ ಮುಂದಾಗಿದೆ.

ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಪ್ರೀತಿಯ ಹೆಸರಲ್ಲಿ ಯಾರೂ ಜಿಹಾದ್​ ಮಾಡುವಂತಿಲ್ಲ. ಯಾರಾದರೂ ಇಂತಹ ಕೆಲಸ ಮಾಡುತ್ತಿದ್ದವರಿಗೆ ಅಂತವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ. ಈ ದೃಷ್ಟಿಯಿಂದ ಕಾನೂನು ಜಾರಿಗೆ ತರಲಿದ್ದೇವೆ ಎಂದು ಹೇಳಿದ್ದಾರೆ.

ಬಿಜೆಪಿ ಈ ಹಿಂದೆ ಕೂಡ ಲವ್ ಮತ್ತು ಜಿಹಾದ್ ಎಂದು ಪದಪ್ರಯೋಗಿಸಿ ವೋಟ್ ಬ್ಯಾಂಕ್ ರಾಜಕೀಯ ಮಾಡಿತ್ತು. ಬಿಜೆಪಿ ಆಡಳಿತದ ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಅನ್ಯಧರ್ಮೀಯ ವಿವಾಹಗಳ ವಿರುದ್ಧ ಕಾನೂನು ಜಾರಿಗೆ ತರುವುದಾಗಿ ಸಿಎಂ ಹೇಳಿದ್ದರು. ಇದೀಗ ಮಧ್ಯಪ್ರದೇಶ ಕೂಡ ಕಾನೂನು ಜಾರಿಗೆ ಮುಂದಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು