ಬೆಂಗಳೂರು: ಇನ್ನು ಮುಂದೆ ರಾಜ್ಯ ಹೆದ್ದಾರಿಗಳಲ್ಲೂ ಸುಂಕ ವಸೂಲಿ ಕೇಂದ್ರಗಳು ಬರಲಿವೆ. ಈ ಮೂಲಕ ಲಾಕ್ಡೌನ್, ತೈಲ ಬೆಲೆಯೇರಿಕೆ ಇತ್ಯಾದಿಗಳಿಂದ ತತ್ತರಿಸಿರುವ ವಾಹನ ಮಾಲಿಕರಿಗೆ ಹೆಚ್ಚುವರಿ ಹೊರೆಯೊಂದು ಬೀಳಲಿದೆ.
ಈಗಾಗಲೇ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ರಾಜ್ಯದ ಪ್ರಮುಖ 10 ಹೆದ್ದಾರಿಗಳಲ್ಲಿ ರಸ್ತೆ ಬಳಕೆದಾರರ ಶುಲ್ಕ ಸಂಗ್ರಹಿಸಲು ಏಜೆನ್ಸಿಗಳಿಂದ ಬಿಡ್ ಆಹ್ವಾನಿಸಿದೆ. ಶೀಘ್ರದಲ್ಲೇ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಗೇಟುಗಳು ಕಾಣಿಸಿಕೊಳ್ಳಬಹುದು.
ಸದ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಟ್ ಮೂಲಕ ಶುಲ್ಕ ಸಂಗ್ರಹಿಸಲಾಗುತ್ತಿದೆ. ರಾಜ್ಯ ಹೆದ್ದಾರಿಗಳಲ್ಲಿ ಇದು ಯಾವಾಗಿನಿಂದ ಜಾರಿಯಾಗಲಿದೆಯೆಂಬ ಪ್ರಕಟಣೆ ಇನ್ನೂ ಹೊರ ಬಿದ್ದಿಲ್ಲ.