ಇನ್ನೂ ಮೋದಿ ಭಜನೆಯ ವ್ಯಕ್ತಿಪೂಜೆಯಲ್ಲಿ ಇರುತ್ತಿರೋ? ಜನರ ಜೀವ ಉಳಿಸಲು ಧ್ವನಿ ಎತ್ತುತ್ತಿರೋ? : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಗರಂ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯವೆಸಗಿದೆ. 25 ಸಂಸದರು, ಮೂರು ಕೇಂದ್ರ ಮಂತ್ರಿಗಳು, ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಇವರೆಲ್ಲ ಮೋದಿ ಎದುರು ಕೈಕಟ್ಟಿ, ನಡುಬಗ್ಗಿಸಿ ನಿಲ್ಲಲಷ್ಟೇ ಲಾಯಕ್ಕು ಹೊರತು ನಯಾಪೈಸೆ ಉಪಯೋಗವಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ, ನಿನ್ನೆ ಮುಖಪುಟದ ಫುಲ್ ಪೇಜ್‌ನಲ್ಲಿ ಮೋದಿ ಮುಖದ ಜಾಹಿರಾತು ಹಾಕಿದ್ದು ಈ ದೌರ್ಭಗ್ಯಕ್ಕಾ? ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್ ರಾಜ್ಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ, ಆದರೂ ಕೇಂದ್ರ ಸರ್ಕಾರ ನೆರವಿಗೆ ಬಾರದೇ ಮೌನವಾಗಿದೆ, ಇದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿವೇ ಕಾರಣ ಎಂದು ಎಂದು ಕಾಂಗ್ರೆಸ್ ಟೀಕಿಸಿದೆ.

ಸೋಂಕಿನಿಂದ ರಾಜ್ಯದಲ್ಲಿ ಜನ ತತ್ತರಿಸಿ ಹೋಗಿದ್ದಾರೆ, ಆಕ್ಸಿಜನ್, ರೆಮಿಡಿಸಿವಿರ್ ಇಲ್ಲದೆ ನಿತ್ಯ ನರಳಾಟವಿದೆ.
ನಿನ್ನೆ ಒಂದೇ ದಿನ ರಾಜ್ಯದಲ್ಲಿ 25 ಸಾವಿರ ಪ್ರಕರಣ ದಾಖಲಾಗಿದೆ. ಕೇಂದ್ರ ನೀಡಿದ ರೆಮಿಡಿಸಿವಿರ್ ಕೇವಲ 25 ಸಾವಿರ. ಆಕ್ಸಿಜನ್‌ನಂತೂ ಕೇಳಲೇಬೇಡಿ!
ಒಕ್ಕೂಟ ಸರ್ಕಾರವೊಂದು ನಡೆದುಕೊಳ್ಳುವ ರೀತಿಯಾ ಇದು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಆಕ್ಸಿಜನ್, ರೆಮಿಡಿಸಿವಿರ್, ಮುಂತಾದ ವೈದ್ಯಕೀಯ ಅಗತ್ಯಗಳನ್ನ ಕೇಂದ್ರದ ನಿಯಂತ್ರಣ ಏಕೆ?
ತನಗೆ ಬೇಕಾದವರಿಗೆ, ಬೇಕಾದಷ್ಟು ನೀಡುವ ವ್ಯವಸ್ಥೆಯನ್ನು ಸರ್ಕಾರ ಏಕೆ ಪ್ರಶ್ನೆ ಮಾಡ್ತಿಲ್ಲ?
ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಮೋದಿ ಭಜನೆಯ ವ್ಯಕ್ತಿಪೂಜೆಯಲ್ಲಿ ಇರುತ್ತಿರೋ? ಜನರ ಜೀವ ಉಳಿಸಲು ಧ್ವನಿ ಎತ್ತುತ್ತಿರೋ? ಇದೇನಾ ನಿಮ್ಮ ಡಬಲ್ ಇಂಜಿನ್ ಸಹಕಾರ? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು