ಉಸಿರಿನಿಂದ ಗ್ಲುಕೋಸಿನ ಪ್ರಮಾಣವನ್ನು ಅಳೆಯುವ ನೂತನ ಸಂಶೋಧನೆ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಗಲ್ಫ್ ನ್ಯೂಸ್(05-10-2020): ಮನುಷ್ಯನ ಉಸಿರಿನಿಂದ ರಕ್ತದಲ್ಲಿರುವ ಗ್ಲುಕೋಸಿನ ಪ್ರಮಾಣವನ್ನು ಅಳೆಯುವ ಮಹತ್ವದ ಸಂಶೋಧನೆಯೊಂದು ಕತರಿನಲ್ಲಿ ನಡೆದಿದೆ.

ಕತರ್ ಫೌಂಡೇಶನ್ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ “ವರ್ಜೀನಿಯಾ ಕಾಮನ್‌ವೆಲ್ತ್ ಯುನಿವರ್ಸಿಟಿ ಸ್ಕೂಲ್ ಆಫ್ ದ ಆರ್ಟ್ಸ್” ನ ಫಿಸಿಕ್ಸ್ ಲಿಬರಲ್ ಆರ್ಟ್ಸ್ ಆಂಡ್ ಸೈನ್ಸ್ ಪ್ರೋಗ್ರಾಂ ಪ್ರೊಫೆಸರ್ ಡಾ| ಖಾಲಿದ್ ಸಯೀದ್ ಎಂಬವರೇ ಈ ನೂತನ ಸಂಶೋಧನೆ ಮಾಡಿದವರು. ಅತ್ಯಾಧುನಿಕ ನ್ಯಾನೋ ತಂತ್ರಜ್ಞಾನವನ್ನು ಬಳಸಿ ಇದನ್ನು ಸಾಧಿಸಲಾಗಿದೆ.

ಈ ಸಂಶೋಧನೆಯಿಂದಾಗಿ ಇನ್ನು ಮುಂದೆ ರಕ್ತದಲ್ಲಿರುವ ಗ್ಲುಕೋಸಿನ ಮಟ್ಟವನ್ನು ಅಳೆಯಲು ರಕ್ತ ಹೀರಬೇಕಾದ ಅಗತ್ಯ ಬರುವುದಿಲ್ಲ. ಆಗಾಗ ರಕ್ತದಲ್ಲಿರುವ ಗ್ಲುಕೋಸಿನ ಪ್ರಮಾಣವನ್ನು ಪರೀಕ್ಷಿಸಬೇಕಾಗಿ ಬರುವ ಮಧುಮೇಹ ರೋಗಿಗಳಿಗೆ ಈ ಸಂಶೋಧನೆಯು ಒಂದು ಶುಭ ಸುದ್ದಿಯಾಗಿದೆ.

ವಿಶ್ವದ ಅತಿ ಶ್ರೀಮಂತ ದೇಶಗಳಲ್ಲೊಂದಾಗಿರುವ ಕತರ್ ದೊಡ್ಡ ಮೊತ್ತದ ಹಣವನ್ನು ವೈಜ್ಞಾನಿಕ ಸಂಶೋಧನೆಗಳಿಗಾಗಿಯೆಂದೇ  ಮೀಸಲಿರಿಸುತ್ತದೆ. ಕತರ್ ಫೌಂಡೇಶನ್ ಸಂಸ್ಥೆಯ “ಕತರ್ ನ್ಯಾಷನಲ್ ರಿಸರ್ಚ್ ಫಂಡ್” ನಿಂದಲೇ ಈ ಸಂಶೋಧನೆಗೆ ಬೇಕಾಗಿರುವ ಹಣವನ್ನು ವಿನಿಯೋಗಿಸಿರುವುದು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು