ಇನ್ನೂ ಹದಿನೈದು ವರ್ಷ ನನ್ನದೇ ಅಧ್ಯಕ್ಷಗಿರಿ! | ಹೊಸ ಕಾನೂನಿಗೆ ರಷ್ಯಾದ ಪುತಿನ್ ಸಹಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಾಸ್ಕೋ: 2036 ವರೆಗೂ ತಾನೇ ಅಧ್ಯಕ್ಷಗಿರಿಯಲ್ಲಿ ಮುಂದುವರಿಯುವ ಹೊಸ ಕಾನೂನಿಗೆ ರಷ್ಯಾ ಅಧ್ಯಕ್ಷ ಸಹಿ ಹಾಕಿದ್ದಾರೆ.  ವಿಲಕ್ಷಣ ಕಾನೂನು ವಿಶ್ವಾದ್ಯಂತ ರಾಜಕೀಯ ವಿಶ್ಲೇಷಕರನ್ನು ಹುಬ್ಬೇರಿಸುವಂತೆ ಮಾಡಿದೆ.

ಈಗಾಗಲೇ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಅಧಿಕಾರದಲ್ಲಿರುವ ಪುತಿನ್ ಸಹಿ ಹಾಕಿರುವ ಕಾನೂನಿನ ಪ್ರಕಾರ ಇನ್ನು ಮುಂದೆ ಅಧ್ಯಕ್ಷರ ಅಧಿಕಾರವು ಎರಡು ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಇದು ಪುತಿನ ಅವರ ಈಗಿನ ಹಾಗೂ ಹಿಂದಿನ ಅಧಿಕಾರಗಳನ್ನು ಪರಿಗಣಿಸುವುದಿಲ್ಲ. ಹಾಗಾಗಿ ಪುತಿನ್ ಅವರು ಇನ್ನೆರಡು ಅವಧಿಗೆ ಅಧ್ಯಕ್ಷರಾಗುವ ಅವಕಾಶ ಸಿಗಲಿದೆ.

ಹೊಸ ಕಾನೂನಿನಂತೆ ವಿದೇಶಿ ಪೌರತ್ವ ಹೊಂದಿರುವ ವ್ಯಕ್ತಿ ರಷ್ಯಾ ಅಧ್ಯಕ್ಷರಾಗುವ ಅವಕಾಶ ಇರುವುದಿಲ್ಲ. ದೇಶದ ಉನ್ನತ ನ್ಯಾಯಾಲಯಗಳ ನ್ಯಾಯಧೀಶರನ್ನು ವಜಾಗೊಳಿಸುವ ಅಧಿಕಾರ ಅಧ್ಯಕ್ಷರಿಗೆ ಇರುವುದು. ಸಂಸತ್ತು ಅಂಗೀಕರಿಸುವ ಕಾನೂನುಗಳನ್ನು ತಿರಸ್ಕರಿಸಲು ಅಧ್ಯಕ್ಷರಿಗೆ ಸಾಧ್ಯವಾಗುವುದು. ಸರ್ಕಾರದ ಮುಖ್ಯಸ್ಥರನ್ನು ನೇಮಿಸುವ ಅಧಿಕಾರ ಸಂಸತ್ತಿಗೆ ಇರುವುದು.

ಕಳೆದ ವರ್ಷ ಸಂವಿಧಾನದ ಸುಧಾರಣೆಯ ಹೆಸರಿನಲ್ಲಿ, ಸಂವಿಧಾನ ಬದಲಾವಣೆಯ ಪ್ರಸ್ತಾವನೆ ಇರಿಸಿದ್ದರು. ಬಳಿಕ ನಡೆದ ಸಾರ್ವಜನಿಕ ಮತದಾನದಲ್ಲಿ ಇದಕ್ಕೆ ಬೆಂಬಲವೂ ದೊರಕಿತ್ತು. ರಷ್ಯಾ ಸಂಸತ್ತಿನ ಕೆಳ ಹಾಗೂ ಮೇಲ್ಮನೆಗಳಲ್ಲಿ ಇದನ್ನು ಅಂಗೀಕರಿಸಲಾಗಿತ್ತು.

ಹೊಸ ಸರ್ವಾಧಿಕಾರಿ ಕಾನೂನಿಗೆ ವಿಶ್ವಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು