ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಶಿಶುಗಳ ಮಾರಣಹೋಮ

hospital
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಧ್ಯಪ್ರದೇಶ(12-02-2020): ರಾಜ್ಯ ರಾಜಧಾನಿ ಭೋಪಾಲ್‌ನಿಂದ 490 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ಶಹಾದೋಲ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ 8 ಶಿಶುಗಳು ಮೃತಪಟ್ಟಿದ್ದಾರೆ.

ಶಿಶುಗಳ ಸಾವಿಗೆ ಕಾರಣವಾಗಿರುವ ವಿಚಾರಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಆದೇಶಿಸಿದ್ದಾರೆ.

ನವಜಾತ ಶಿಶು ಸೇರಿದಂತೆ ಶಿಶುಗಳನ್ನು ಆಸ್ಪತ್ರೆಯ ಸಿಕ್ ನವಜಾತ ಆರೈಕೆ ಘಟಕ (ಎಸ್‌ಎನ್‌ಸಿಯು) ಮತ್ತು ಮಕ್ಕಳ ತೀವ್ರ ನಿಗಾ ಘಟಕಕ್ಕೆ (ಪಿಐಸಿಯು) ದಾಖಲಿಸಲಾಗಿದೆ.

ಮೃತ ಶಿಶುಗಳು ಬುಡಕಟ್ಟು ಪ್ರಾಬಲ್ಯದ ಶಹಾದೋಲ್, ಉಮರಿಯಾ ಮತ್ತು ಅನುಪ್ಪೂರು ಜಿಲ್ಲೆಯದ್ದು. ಅನಿಯಂತ್ರಿತ ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆಗಳಿಂದ ಹೆಚ್ಚಿನ ಶಿಶುಗಳು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಆರೋಗ್ಯ ಸಚಿವ ಡಾ. ಪ್ರಭುರಾಮ್ ಚೌಧರಿ ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು