ಇಂದು ರಾತ್ರಿಯಿಂದ ಕುವೈತಿನಿಂದ ಮತ್ತು ಕುವೈತಿಗೆ ವೈಮಾನಿಕ ಸೇವೆಗಳು ಇರುವುದಿಲ್ಲ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕುವೈತ್ ಸಿಟಿ(21-12-2020): ಸೌದಿ, ಒಮನ್ ಬಳಿಕ ಕುವೈತ್ ಕೂಡಾ ಅಂತರಾಷ್ಟ್ರೀಯ ವೈಮಾನಿಕ ಸೇವೆಗಳನ್ನು ನಿಲ್ಲಿಸಲಿದೆ. ಇಂದು ರಾತ್ರಿ ಹನ್ನೊಂದು ಗಂಟೆಯಿಂದ ಕುವೈತಿಗೆ ಬರುವ ಮತ್ತು ಕುವೈತಿನಿಂದ ಹೊರಹೋಗುವ ವಿಮಾನ ಪ್ರಯಾಣಗಳನ್ನು ರದ್ದು ಪಡಿಸಲಾಗಿದೆ.

ಈ ನಿಷೇಧವು ಜನವರಿ ಒಂದರ ವರೆಗೆ ಮುಂದುವರಿಯಲಿದ್ದು, ಬಳಿಕ ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನದಲ್ಲಿ ಮಾರ್ಪಾಡು ಮಾಡುವ ಸಾಧ್ಯತೆಯಿದೆ.

ನಿವಾಸಿಗಳ ಆರೋಗ್ಯದ ಕಾಳಜಿಯ ದೃಷ್ಟಿಯಿಂದ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಈ ನಿಯಮಾವಳಿಯನ್ನು ಘೋಷಿಸಲಾಗಿದ್ದು, ವ್ಯೋಮ ಗಡಿಗಳ ಜೊತೆಗೆ ಭೂ ಮಾರ್ಗವನ್ನೂ ಬಂದ್ ಮಾಡಲಾಗಿದೆ.

ಬ್ರಿಟನಿನಲ್ಲಿ ಪತ್ತೆಯಾಗಿ, ಯುರೋಪಿನ ಹಲವು ದೇಶಗಳಿಗೆ ಹರಡಿರುವ ನವೀನ ತಳಿಯ ಕೊರೋನಾ ವೈರಸ್ ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಈ ಕಾರಣದಿಂದ ಜಗತ್ತಿನಾದ್ಯಂತ ಎರಡನೇ ಸುತ್ತಿನ ಲಾಕ್‌ಡೌನ್ ಶುರುವಾಗಿದೆ.

ಕುವೈತಿನಲ್ಲಿ ಭೂಕಂಪ

ಕುವೈತ್-ಸೌದಿ ಗಡಿಯಲ್ಲಿ  4.6 ಮಾಗ್ನಿಟ್ಯೂಡ್ ತೀವ್ರತೆಯ ಭೂಕಂಪ ಉಂಟಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 6.04 ರ ಹೊತ್ತಿಗೆ ಕಂಪನದ ಅನುಭವ ಉಂಟಾಗಿದ್ದು, ಹಾನಿಗಳುಂಟಾದ ಬಗೆಗೆ ವರದಿಯಾಗಿಲ್ಲ.

ಸುಮಾರು ಮೂರರಿಂದ ಆರು ಸೆಕೆಂಡುಗಳ ಅವಧಿಯ ಕಂಪನವಾಗಿದೆ ಎಂದು ಕುವೈತ್ ನ್ಯೂಸ್ ಎಜೆನ್ಸಿ ವರದಿ ಮಾಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು