ಇಂದಿನಿಂದ ಸೌದಿ ಅರೇಬಿಯಾವು ತನ್ನೆಲ್ಲಾ ಗಡಿಗಳನ್ನು ತೆರೆಯಲಿದೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿದ್ದಾ(3-1-2021): ಪಾಶ್ಚಾತ್ಯ ದೇಶಗಳಲ್ಲಿ ಹೊಸ ಪ್ರಬೇಧದ ಕೊರೋನಾ ವೈರಸ್ ಹರಡಿದ ಕಾರಣದಿಂದ ಬಂದ್ ಮಾಡಲಾಗಿದ್ದ ತನ್ನೆಲ್ಲಾ ಗಡಿಗಳನ್ನು ಸೌದಿ ಅರೇಬಿಯಾವು ಇಂದು ತೆರೆಯಲಿದೆ. ಇಂದು ಬೆಳಿಗ್ಗೆ ಹನ್ನೊಂದು ಗಂಟೆಯಿಂದ ಹೊರ ದೇಶಗಳಿಂದ ವಿಮಾನಗಳು ಆಗಮಿಸಬಹುದಾಗಿದೆ.

ಅದೇ ವೇಳೆ ಹೊಸ ರೂಪಾಂತರಿತ ವೈರಸ್ ಹರಡಿದ ದೇಶಗಳಿಂದ ಬರುವ ಜನರು ಸೌದಿಯಲ್ಲಿ ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನಿಗೆ ಒಳಪಡಬೇಕಾಗುತ್ತದೆ.

ಎರಡು ವಾರಗಳ ಮೊದಲು ಸೌದಿಯು ತನ್ನೆಲ್ಲಾ ಭೂ, ವಾಯು, ಸಾಗರ ಗಡಿಗಳನ್ನು ಮುಚ್ಚಿತ್ತು. ಇನ್ನು ಮುಂದೆ ಕೊರೋನಾ ನಿಯಮಾವಳಿಗಳನ್ನು ಪಾಲಿಸಿ ಸೌದಿ ಪ್ರಜೆಗಳೂ, ವಿದೇಶೀಯರೂ ಸೌದಿ ಅರೇಬಿಯಾ ಪ್ರವೇಶಿಸಲು ಅನುಮತಿಯಿದೆ.

ಭಾರತದಿಂದ ಸೌದಿ ಅರೇಬಿಯಾಗೆ ನೇರ ವೈಮಾನಿಕ ಸೇವೆಯ ಕುರಿತಂತೆ ಸ್ಪಷ್ಟವಾದ ಮಾರ್ಗಸೂಚಿಗಳು ಇನ್ನೂ ಲಭ್ಯವಾಗಿಲ್ಲ. ಶೀಘ್ರದಲ್ಲೇ ಈ ಕುರಿತು ಪ್ರಕಟಣೆ ಬರಲಿದೆಯೆಂದು ನಿರೀಕ್ಷಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು