20 ತಿಂಗಳ ಬಳಿಕ 1ರಿಂದ 5 ತರಗತಿ ಆರಂಭ: ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಶಾಲೆಗಳು ಪುನರಾರಂಭವಾಗಲಿವೆ.

ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ತರಗತಿಗಳು ಇಪ್ಪತ್ತು ತಿಂಗಳ ನಂತರ ಮತ್ತೆ ಆರಂಭವಾಗಿವೆ. ಇಂದಿನಿಂದ ಶಾಲೆಯಲ್ಲಿ ಚಿಣ್ಣರ ಕಲರವ ಕೇಳಿ ಬರಲಿದೆ. ಶಾಲೆಗಳಲ್ಲಿ ಪುಟಾಣಿಗಳ ಪಾಠ ,ಪ್ರವಚನ, ಆಟಕ್ಕಾಗಿ ಶಿಕ್ಷಕರು ಸಕಲ ಸಿದ್ದತೆ ಪೂರ್ಣಗೊಂಡಿವೆ. ಮಕ್ಕಳ ಬರುವಿಕೆಯನ್ನು ಶಿಕ್ಷಕರು ಸ್ವಾಗತಿಸಲು ಕಾತುರರಾಗಿದ್ದಾರೆ.

ಕರೋನಾ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ 6ನೇ ತರಗತಿಯಿಂದ ಎಲ್ಲಾ ಕ್ಲಾಸ್‌ ಗಳು ನಡೆಯುತ್ತಿವೆ. ಇದಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ಕೂಡಾ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ಪ್ರಾಥಮಿಕ ತರಗತಿಗಳನ್ನು ಆರಂಭಿಸುವಂತೆ ಪೋಷಕರ ಒತ್ತಾಯ ಹಾಗೂ ಶಿಕ್ಷಣ ತಜ್ಞರ ಮಾಹಿತಿ ಅನ್ವಯ ಇಂದಿನಿಂದ ಒಂದರಿಂದ ಐದರವರೆಗಿನ ತರಗತಿಗಳು ಕೂಡಾ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಕೋವಿಡ್ ಮಾರ್ಗಸೂಚಿ ಪ್ರಕಾರ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. 15-20 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಯಲ್ಲಿ ತರಗತಿಗಳನ್ನು ನಡೆಸಬೇಕು , ಮಧ್ಯಾಹ್ನದ ವರೆಗೆ ಮಾತ್ರ ತರಗತಿ ನಡೆಸಬೇಕು ಹಾಗೂ ಶಿಕ್ಷಕರಿಗೆ ಕಡ್ಡಾಯ ಎರಡು ಡೋಸ್ ಲಸಿಕೆ, ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಬಳಸುವ ಬಗ್ಗೆ ಶಿಕ್ಷಣ ಇಲಾಖೆ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು