ಐರ್ಲೆಂಡಿನಲ್ಲಿ ಮೂವರು ಭಾರತೀಯರ ಹತ್ಯೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಬೆಟ್ಟದಪುರ(31/10/2020): ಐರ್ಲೆಂಡಿನಲ್ಲಿ ಮೂವರು ಭಾರತೀಯರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಮೈಸೂರಿನ ಸಮೀಪದ ಹಲಗನಹಳ್ಳಿಯ ಸೀಮಾಬಾನು (37), ಪುತ್ರಿ ಅಶ್ರಿರಾ ಸೈಯ್ಯದ್ (11) ಹಾಗೂ ಪುತ್ರ ಫೈಜ್ಹಾನ್ ಸೈಯ್ಯದ್ (6) ಕೊಲೆಯಾದವರು ಎನ್ನಲಾಗಿದೆ. ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಈ ಭೀಕರ ಘಟನೆ ನಡೆದಿದೆ.

ಕೊಲೆಯಾಗಿರುವ ಸೀಮಾಬಾನು 13 ವರ್ಷಗಳ ಹಿಂದೆ ಮೈಸೂರಿನ ರಾಜೀವ್‌ನಗರದಲ್ಲಿ ವಾಸವಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸಯ್ಯದ್ ಸಮೀರ್ ಎಂಬುವವರನ್ನು ವಿವಾಹವಾಗಿ ಐರ್ಲೆಂಡ್‌ಗೆ ತೆರಳಿದ್ದರು.

‘ಕೆಲವು ದಿನಗಳ ಹಿಂದೆಯಷ್ಟೇ ಸೀಮಾಬಾನು ವಿಡಿಯೊ ಕಾಲ್ ಮಾಡಿ ಪತಿ ತನ್ನನ್ನು ಉಳಿಸುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು’ ಎಂದು ಸೀಮಾಬಾನು ಸೋದರ ಮೊಹಮ್ಮದ್ ಘಸನ್ ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು