ದುಬೈಯಲ್ಲಿ ಭಾರತೀಯನ ಮುಖಕ್ಕೆ ಪ್ಲಾಸ್ಟಿಕ್ ಚೀಲ ಹಾಕಿ ದರೋಡೆ ಮಾಡಿದ ಪಾಕಿಸ್ತಾನಿಗಳು

dubai
Share on facebook
Share on twitter
Share on linkedin
Share on whatsapp
Share on telegram
Share on email
Share on print

ಯುಎಇ(23-11-2020): 33 ವರ್ಷದ ಭಾರತೀಯ ವ್ಯಕ್ತಿಯೊರ್ವನ ಮೇಲೆ ಮುಖವಾಡ ಧರಿಸಿದ ಮೂವರು ಪಾಕಿಸ್ತಾನಿ ದರೋಡೆಕೋರರು ಹಲ್ಲೆ ನಡೆಸಿ, ದರೋಡೆ ಮಾಡಿದ್ದಾರೆ.

ದುಬೈನ ತನ್ನ ಮನೆಯಲ್ಲಿ ನಿದ್ದೆ ಮಾಡುವಾಗ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಮತ್ತು ಹಣವನ್ನು ಕೂಡ ಪಾಕಿಸ್ತಾನಿಗಳು ಕಳ್ಳತನ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ದಾಳಿಕೋರರು ಭಾರತೀಯನ ಮುಖದ ಮೇಲೆ ಪ್ಲಾಸ್ಟಿಕ್ ಚೀಲ ಮತ್ತು ಬಾಯಿಗೆ ಟೇಪ್ ಹಾಕಿ ಕೃತ್ಯ ಎಸಗಿದ್ದಾರೆ.

ಅವರು ವೈದ್ಯಕೀಯ ಮುಖವಾಡಗಳನ್ನು ಧರಿಸಿದ್ದರು. ಅವರಲ್ಲಿ ಒಬ್ಬರು ನನ್ನನ್ನು ತಡೆದರು ಮತ್ತು ಇನ್ನೊಬ್ಬರು ಲೋಹದ ಪಟ್ಟಿಯಿಂದ ನನ್ನ ಮೇಲೆ ಹಲ್ಲೆ ನಡೆಸಿದರು. ಕಟ್ಟಿಹಾಕಿದರು ಎಂದು ಸಂತ್ರಸ್ತ ಹೇಳಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು