ಅಮೆರಿಕಾ(07-01-2021): ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡನ್ ಅವರ ಗೆಲುವನ್ನು ವಿರೋಧಿಸಿ ಸಾವಿರಾರು ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುನೈಟೆಡ್ ಸ್ಟೇಟ್ಸ್ ಕ್ಯಾಪಿಟಲ್ ಕಟ್ಟಡವನ್ನು ನುಗ್ಗಿ ಹಿಂಸಾಚಾರವನ್ನು ನಡೆಸಿದ ಸುದ್ದಿ ವಿಶ್ವದಾದ್ಯಂತ ಜನರನ್ನು ಬೆಚ್ಚಿಬೀಳಿಸಿದೆ.
ಅಮೆರಿಕದ ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ ಎಂದು ಕರೆಯಲ್ಪಡುವ, ಮಾಸ್ಕ್ ಧರಿಸದ ಜನಸಮೂಹ ರಾಜ್ಯ ಪೊಲೀಸರೊಂದಿಗೆ ಘರ್ಷಣೆಗೆ ನಡೆಸಿದ್ದರು.
ಪರಿಸ್ಥಿತಿಯನ್ನು ನಿಭಾಯಿಸಲು ವೈಟ್ ಹೌಸ್, ಸೆನೆಟ್ ಮತ್ತು ಇಡೀ ಕ್ಯಾಪಿಟಲ್ ಮೇಲೆ ಲಾಕ್ಡೌನ್ಗೆ ಹೇರಲಾಗಿದೆ. ಘರ್ಷಣೆಯ ವೀಡಿಯೊಗಳು ಆತಂಕಕಾರಿಯಾದ ದೃಶ್ಯಗಳನ್ನು ಬಹಿರಂಗಗೊಳಿಸಿದೆ.
ಕೆಲವು ವೀಡಿಯೊಗಳು ಪ್ರತಿಭಟನೆಯಲ್ಲಿ ಭಾರತೀಯ ಧ್ವಜವನ್ನು ಸಹ ತೋರಿಸಿದೆ. “ನಮಗೆ ಟ್ರಂಪ್ ಬೇಕು” ಎಂದು ಪ್ರತಿಭಟನೆ ನಡೆಸಿದವರಲ್ಲಿ ಭಾರತೀಯ ತ್ರಿವರ್ಣ ಧ್ವಜವೂ ಜನಸಮೂಹದ ನಡುವೆ ಹಾರುತ್ತಿರುವುದನ್ನು ಕಾಣಬಹುದಾಗಿದೆ.
Why were Indian nationalists raising the Indian flag at the #TrumpInsurrection? pic.twitter.com/QOnOcr2idW
— Pieter Friedrich (@FriedrichPieter) January 7, 2021