ಅನಿವಾಸಿಗಳಿಗಿನ್ನು ವಿದೇಶೀ ವಾಸಸ್ಥಳದ ವಿಳಾಸವನ್ನು ತಮ್ಮ ಪಾಸ್‌ಪೋರ್ಟಿನಲ್ಲಿ ಸೇರಿಸಿಕೊಳ್ಳಬಹುದು

Share on facebook
Share on twitter
Share on linkedin
Share on whatsapp
Share on telegram
Share on email
Share on print

ದುಬೈ(27-10-2020): ಅನಿವಾಸಿ ಭಾರತೀಯರು ವಾಸಿಸುವ ದೇಶಗಳಲ್ಲಿನ ಅವರ ವಿಳಾಸಗಳನ್ನು ತಮ್ಮ ಪಾಸ್‌ಪೋರ್ಟ್‌‌ಗಳಲ್ಲಿ ಸೇರಿಸಲು ಕೇಂದ್ರ ವಿದೇಶಾಂಗ ಇಲಾಖೆಯು ಅನುಮತಿ ನೀಡಿದೆ. ಯುಎಇಯಲ್ಲಿರುವ ಅನಿವಾಸಿಗಳಿಗೆ ಈ ಅವಕಾಶವಿರಲಿದೆಯೆಂದು ದುಬೈಯಲ್ಲಿರುವ ಭಾರತೀಯ ದೂರವಾಸ ಕಛೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಾವಿರಾರು ಭಾರತೀಯರಿಗೆ ದುಬೈಯಲ್ಲಿ ಸ್ವಂತ ಮನೆಗಳಿವೆ. ಭಾರತದಲ್ಲಿ ಅವರು ಬಹಳ ಕಡಿಮೆ ಅವಧಿಗೆ ಬಂದು ಹೋಗುವವರು. ಹೆಚ್ಚಿನ ಸಮಯವನ್ನು ವಿದೇಶಗಳಲ್ಲೇ ಕಳೆಯುವರು. ಹೀಗಾಗಿ ಭಾರತದ ವಿಳಾಸಕ್ಕಿಂತಲೂ ಹೆಚ್ಚಾಗಿ ವಿದೇಶೀ ವಿಳಾಸವೇ ಅಂಥವರಿಗೆ ಹೆಚ್ಚು ಮುಖ್ಯವಾದುದು.

ಈ ಕಾರಣದಿಂದಾಗಿ ಅಲ್ಲಿನ ವಿಳಾಸವನ್ನು ಪಾಸ್‌ಪೋರ್ಟಿನಲ್ಲಿ ಸೇರಿಸಬೇಕೆಂದು ಹಲವಾರು ಅನಿವಾಸಿಗಳ ಬೇಡಿಕೆಯಾಗಿತ್ತು. ಇವರ ಬೇಡಿಕೆಗಳನ್ನು ಇದೀಗ ವಿದೇಶಾಂಗ ಸಚಿವಾಲಯವು ಪೂರೈಸಿದೆ.

ಹಾಲಿ ಪಾಸ್‌ಪೋರ್ಟುಗಳಲ್ಲಿ ವಿದೇಶೀ ವಿಳಾಸವನ್ನು ಸೇರಿಸುವ ಅವಕಾಶವಿರುವುದಿಲ್ಲ. ಸೇರಿಸಲಿಚ್ಚಿಸುವವರು ಹೊಸ ಪಾಸ್‌ಪೋರ್ಟಿಗೆ ಅರ್ಜಿ ಸಲ್ಲಿಸಬಹುದೆಂದು ಪ್ರಕಟಣೆ ತಿಳಿಸಿದೆ. ಸ್ವಂತ ಮನೆಯ ಅಥವಾ ಬಾಡಿಗೆ ಮನೆಯ ವಿಳಾಸವನ್ನು ನೀಡಬಹುದಾಗಿದ್ದು, ಬಾಡಿಗೆ ಕರಾರು ಪತ್ರ, ವಿದ್ಯುತ್ ಬಿಲ್, ದೂರವಾಣಿ ಬಿಲ್ ಇತ್ಯಾದಿಗಳನ್ನು ಮನೆಯ ಆಧಾರವಾಗಿ ಸ್ವೀಕರಿಸಲಾಗುತ್ತದೆ.

ಇದು ಯುಎಇಗೆ ಮಾತ್ರವೇ ಅನ್ವಯವಾಗುವುದೇ ಅಥವಾ ಎಲ್ಲಾ ಕೊಲ್ಲಿ ದೇಶಗಳಿಗೆ ಅನ್ವಯವಾಗುವುದೇ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು