ಕುವೈತ್ ಸಿಟಿ(9-11-2020) ಕುವೈತಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವತಿಯಿಂದ ಅಲ್ಲಿನ ಅನಿವಾಸಿ ಭಾರತೀಯರಿಗೆ ಉಚಿತ ಕಾನೂನಾತ್ಮಕ ಸೇವೆ ನೀಡಲು ಇನ್ನಷ್ಟು ವಕೀಲರನ್ನು ತನ್ನ ಪ್ಯಾನಲಿನಲ್ಲಿ ಸೇರಿಸಿದೆ. ಹೊಸದಾಗಿ ನೇಮಕವಾದ ಏಳೂ ಮಂದಿ ವಕೀಲರೂ ಕುವೈತ್ ಪ್ರಜೆಗಳಾಗಿದ್ದಾರೆ.
ಈ ಮೊದಲು ಪ್ಯಾನಲಿನಲ್ಲಿ ಐದು ಮಂದಿ ಭಾರತೀಯ ವಕೀಲರಷ್ಟೇ ಇದ್ದರು, ಈಗ ಏಳು ಕುವೈತಿಗಳನ್ನೂ ಸೇರಿಸಿ, ಇವರ ಒಟ್ಟು ಸಂಖ್ಯೆ ಹನ್ನೆರಡಕ್ಕೆ ಏರಿಸಲಾಯಿತು. ಇವರು ಕಾನೂನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತೀಯ ಅನಿವಾಸಿಗಳಿಗೆ ಉಚಿತ ಕಾನೂನು ಸಲಹೆಗಳನ್ನು ನೀಡುತ್ತಾರೆ.
ಸಲಹೆ ಸೂಚನೆಗಳನ್ನು ನೀಡುವ ಉಚಿತ ಸೇವೆಗಳನ್ನಷ್ಟೇ ಇವರು ನೀಡಲಿದ್ದು, ವ್ಯಕ್ತಿಗಳು ಯಾವ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ ಎನ್ನುವುದು ಆಯಾ ವ್ಯಕ್ತಿಗಳಿಗೆ ಬಿಟ್ಟಿದ್ದು, ಇದರಲ್ಲಿ ರಾಯಭಾರಿ ಕಛೇರಿಗೆ ಯಾವುದೇ ಪಾತ್ರವಿಲ್ಲವೆಂದು ಕಛೇರಿ ಪ್ರಕಟಣೆ ತಿಳಿಸಿದೆ.