ನವದೆಹಲಿ(10-02-2020): ದೆಹಲಿಯ ಇಂಡಿಯಾ ಗೇಟ್ ಮತ್ತು ಸುತ್ತಮುತ್ತ ಎಲ್ಲ ರೀತಿಯ ಜನಜಂಗುಳಿಯನ್ನು ಇಂದು ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮತಿ ಇದ್ದರೆ ಒಟ್ಟು 100 ಜನರು ಇಂಡಿಯಾ ಗೇಟ್ನಿಂದ 3 ಕಿ.ಮೀ ದೂರದಲ್ಲಿರುವ ಜಂತರ್ ಮಂತರ್ನಲ್ಲಿ ಸೇರಬಹುದಾಗಿದೆ. ಸೆಕ್ಷನ್ 144 ಹೇರಿದ ಕಾರಣ ಇಂಡಿಯಾ ಗೇಟ್ ಸುತ್ತಲೂ ಯಾವುದೇ ಸಭೆ ನಡೆಸಲು ಅನುಮತಿ ಇಲ್ಲ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ, ಚಿತ್ರಹಿಂಸೆ, ಬರ್ಬರ ಕೊಲೆ ಖಂಡಿಸಿ ಇಂಡಿಯಾ ಗೇಟ್ ಬಳಿ ಇಂದು ಪ್ರತಿಭಟನೆ ಘೋಷಿಸಲಾಗಿತ್ತು.