ಯುಎಇ : ಭಾರತದಿಂದ ಹೋಗುವ ವಿಮಾನ ಪ್ರಯಾಣದ ಮೇಲಿನ ನಿಷೇಧ ಜೂನ್ 30 ರ ವರೆಗೆ ಮುಂದುವರಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಬುದಾಬಿ: ಭಾರತದಿಂದ ಯುಎಇ ಗೆ ಹೋಗುವ ವಿಮಾನ ಪ್ರಯಾಣಕ್ಕೆ ಹೇರಿರುವ ನಿಷೇಧದ ಅವಧಿಯನ್ನು ಜೂನ್ 30  ವರೆಗೆ ಮುಂದೂಡಲಾಗಿದೆ. ಜೂನ್ ಹದಿನಾಲ್ಕರಂದು ನಿಷೇಧ ಮುಗಿಯಲಿದೆಯೆಂದು ನಿರೀಕ್ಷಿಸಿದ್ದ ಅನಿವಾಸಿಗಳಿಗೆ ಮತ್ತೊಮ್ಮೆ ನಿರಾಸೆ ಅನುಭವಿಸಬೇಕಾಗಿ ಬಂದಿದೆ.

ಬಗ್ಗೆ ಯುಎಇಯ ನಾಗರಿಕ ವಿಮಾನಯಾನ ಇಲಾಖೆಯು ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳು ಜಂಟಿಯಾಗಿ ಪ್ರಕಟಣೆ ಹೊರಡಿಸಿದೆ.

ಮೊದಲು ಪ್ರಕಟಿಸಿದಂತೆಯೇ ಕಳೆದ ಹದಿನಾಲ್ಕು ದಿನಗಳೊಳಗೆ ಭಾರತದಲ್ಲಿ ತಂಗಿದವರಿಗೂ, ಹದಿನಾಲ್ಕು ದಿನಗಳೊಳಗೆ ಭಾರತದ ಮೂಲಕ ಯುಎಇ ಪ್ರವೇಶಿಸುವ ಇತರ ದೇಶದವರಿಗೂ ಯುಎಇ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ರಾಜತಾಂತ್ರಿಕರಿಗೆ, ಯುಎಇ ಪ್ರಜೆಗಳಿಗೆ ಮತ್ತು ಗೋಲ್ಡನ್ ವೀಸಾ ಹೊಂದಿರುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಂಥವರು ಚಾರ್ಟರ್ಡ್ ವಿಮಾನ ಅಥವಾ ಖಾಸಗೀ ವಿಮಾನಗಳ ಮೂಲಕ ಯುಎಇ ಪ್ರವೇಶಿಸಬಹುದಾಗಿದೆ.

ಇಂಥವರು ಪ್ರಯಾಣಕ್ಕೆ ಸಂಬಂಧಿಸಿದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೊಸ ಪ್ರಕಟಣೆಯಿಂದಾಗಿ ಈಗಾಗಲೇ ರಜಾ ದಿನ ಕಳೆಯಲು ಭಾರತಕ್ಕೆ ಬಂದು ಬಾಕಿಯಾಗಿರುವ ಲಕ್ಷಾಂತರ ಅನಿವಾಸಿಗಳಿಗೆ ಹೊಸದಾಗಿ ಸಮಸ್ಯೆ ಸೃಷ್ಠಿಯಾಗಿದೆ. ಊರಿನಲ್ಲಿಯೂ ಯಾವುದೇ ಉದ್ಯೋಗಕ್ಕೆ ಹೋಗಲಾರದ ಪರಿಸ್ಥಿತಿ ಇರುವುದರಿಂದ ಅನಿವಾಸಿಗಳು ಆರ್ಥಿಕ ಹಿನ್ನೆಡೆ ಅನುಭವಿಸುತ್ತಿದ್ದಾರೆಂಬ ಕೂಗು ಕೇಳಿ ಬರುತ್ತಿದೆ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು