ನವದೆಹಲಿ (21-12-2020): ಹೊಸ ಮ್ಯೂಟಂಟ್ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಂಗ್ಲೆಂಡ್ಗೆ ವಿಮಾನ ಹಾರಾಟವನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿಷೇಧ ಮಾಡಿ ಆದೇಶ ಹೊರಡಿಸಿದೆ.
ಮ್ಯೂಟಂಟ್ ಕೊರೊನಾ ವೈರಸ್ ಇಂಗ್ಲೆಂಡ್ನಲ್ಲಿ ನಿಯಂತ್ರಣಕ್ಕೆ ಸಿಗದೇ ಮಿತಿ ಮೀರಿ ಹೆಚ್ಚಾಗುತ್ತಿದೆ. ಒಂದೇ ದಿನ ಇಂಗ್ಲೆಂಡ್ನಲ್ಲಿ 35,928 ಕೇಸ್ಗಳು ಪತ್ತೆಯಾಗಿದ್ದು, ಯುರೋಪಿನಾದ್ಯಂತ ಈ ಮ್ಯೂಟಂಟ್ ಕೊರೊನಾ ಆತಂಕ ಮೂಡಿಸಿದೆ. ಹೀಗಾಗಿ ಭಾರತ ಸರ್ಕಾರ ತಾತ್ಕಾಲಿಕವಾಗಿ ವಿಮಾನ ಹಾರಾಟವನ್ನು ನಿಷೇಧಿಸಿದೆ.
ಕೊರೊನಾ ವೈರಸ್ ಸೋಂಕು ಅತಿಯಾಗಿ ವ್ಯಾಪಿಸುತ್ತಿದ್ದಂತೆಯೇ ಮುನ್ನೆಚ್ಚರಿಕಾ ಕ್ರಮವಾಗಿ ಸೌದಿ ಅರೇಬಿಯಾ ಭಾನುವಾರ ಅಂತಾರಾಷ್ಟ್ರೀಯ ವಿಮಾನ ಯಾನಗಳನ್ನ ಸ್ಥಗಿತಗೊಳಿಸಿದೆ. ನೌಕಾ ಯಾನ ಹಾಗೂ ಭೂ ಮಾರ್ಗದ ಮೂಲಕವೂ ಸೌದಿಗೆ ಪ್ರವೇಶ ಮಾಡಲು ಕನಿಷ್ಟ ಒಂದು ವಾರಗಳ ಕಾಲ ನಿರ್ಬಂಧ ಹೇರಲಾಗಿದೆ.