ಲಾಕ್‌ಡೌನ್ ಕಾರಣದಿಂದ ಊರಲ್ಲಿ ಬಾಕಿಯಾದವರಿಗೆ ಮತ್ತೆ ತಮ್ಮ ಉದ್ಯೋಗಕ್ಕೆ ಹಾಜರಾಗುವ ಅವಕಾಶ ನೀಡುವಂತೆ ಭಾರತ ಅಗ್ರಹ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದೆಹಲಿ(4-11-2020): ಕೊರೋನಾಕ್ಕೂ ಮೊದಲು ಮತ್ತು ಕೊರೋನಾ ವೇಳೆಯಲ್ಲಿ ಭಾರತಕ್ಕೆ ಬಂದ ಅನಿವಾಸಿಗಳು, ಲಾಕ್‌ಡೌನ್ ಕಾರಣದಿಂದ ಪುನಃ ವಿದೇಶಕ್ಕೆ ಹೋಗಲಾಗದೇ ಬಾಕಿಯಾಗಿದ್ದರು. ಅಂಥವರಿಗೆ ಮರಳಿ ತಮ್ಮ ಉದ್ಯೋಗಕ್ಕೆ ಹಾಜರಾಗುವ ಅವಕಾಶ ನೀಡಬೇಕೆಂದು ಭಾರತವು ಕೊಲ್ಲಿ ದೇಶಗಳನ್ನು ಆಗ್ರಹಿಸಿದೆ.

ಜಿಸಿಸಿ ದೇಶಗಳ ಪ್ರತಿನಿಧಿಗಳೊಂದಿಗಿನ ಆನ್ಲೈನ್ ಸಂವಾದದ ವೇಳೆ ವಿದೇಶಾಂಗ ಸಚಿವ ಎಸ್ ಜಯಶಂಕರ್ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ಜಿಸಿಸಿ ಪ್ರತಿನಿಧಿಗಳು ಅನಿವಾಸಿ ಭಾರತೀಯರಿಗೆ ಮರಳಿ ಉದ್ಯೋಗಕ್ಕೆ ಹಾಜರಾಗಲು ಇರುವ ಅಡೆತಡೆಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದಾರೆ.

ಸಕಾಲದಲ್ಲಿ ಔಷಧ ರವಾನಿಸಿರುವುದು ಸೇರಿದಂತೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ನೀಡಿದ ವಿವಿಧ ಸಹಕಾರವನ್ನೂ ವಿದೇಶಾಂಗ ಸಚಿವ ಜಿಸಿಸಿ ಪ್ರತಿನಿಧಿಗಳ ಮುಂದೆ ಪ್ರಸ್ತಾಪಿಸಿದರು. ಅನಿವಾಸಿ ಭಾರತೀಯರ ಕ್ಷೇಮಾಭಿವೃದ್ಧಿಗಾಗಿ ಜಿಸಿಸಿ ದೇಶಗಳು ತೆಗೆದುಕೊಂಡಿರುವ ಕಾರ್ಯಸೂಚಿಗಳಿಗಾಗಿ ಧನ್ಯವಾದ ಸಲ್ಲಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಕೊಲ್ಲಿ ದೇಶಗಳ ವಿದೇಶಾಂಗ ಸಚಿವರೂ ಸೇರಿದಂತೆ, ಹಲವು ಉನ್ನತ ರಾಜತಾಂತ್ರಿಕರು ಪಾಲ್ಗೊಂಡಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು