ಅನ್‌ಲಾಕ್ 5.0 ನವೆಂಬರ್ ಮೂವತ್ತರವರೆಗೆ ವಿಸ್ತರಿಸಿದ ಕೇಂದ್ರ ಸರಕಾರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(27-10-2020) ಅನ್ಲಾಕ್ 5.0 ಅನ್ನು ನವೆಂಬರ್ ಮೂವತ್ತರ ವರೆಗೆ ವಿಸ್ತರಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಕಳೆದ ತಿಂಗಳು ಮೂವತ್ತರಂದು ಹೊರಡಿಸಿದ ಮಾರ್ಗಸೂಚಿಗಳು  ನವೆಂಬರ್‌ ಮೂವತ್ತರೆಗೆ ಅನ್ವಯವಾಗಲಿದೆಯೆಂದು ಗೃಹ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಹೊಸ ಕೊರೋನಾ ಪ್ರಕರಣಗಳಲ್ಲೂ, ಮರಣ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿದೆಯೆಂದು ಕೇಂದ್ರ ಆರೋಗ್ಯ ಇಲಾಖೆಯ ಲೆಕ್ಕಾಚಾರ. ಹತ್ತು ರಾಜ್ಯಗಳಲ್ಲಿ ದೇಶದ ಎಪ್ಪತ್ತೆಂಟು ಶೇಕಡ ರೋಗಿಗಳಿದ್ದಾರೆಂದೂ ಅದು ತಿಳಿಸಿದೆ.

ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಮಹಾರಾಷ್ಟ್ರಗಳಲ್ಲಿ ಹಬ್ಬಹರಿದಿನಗಳ ಸಮಯದಲ್ಲಿ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈ ರಾಜ್ಯಗಳಲ್ಲಿ ಗಂಭೀರ ಪರಿಸ್ಥಿತಿಯಿದ್ದು, ರೋಗ ಹರಡುವುದನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರಕಾರ ಸೂಚಿಸಿದೆ.

ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 36,469 ಜನರಿಗೆ ರೋಗ ತಗುಲಿರುವುದು ದೃಢೀಕರಣಗೊಂಡಿದೆ. ಹಾಗಾದರೆ ದೇಶದಲ್ಲಿ ಕೊರೋನಾ ತಗುಲಿದವರ ಒಟ್ಟು ಸಂಖ್ಯೆ 79,46,429 ಆಗುತ್ತದೆ. ಅದೇ ರೀತಿ ನಿನ್ನೆ ಕೊರೋನಾ ತಗುಲಿ ಮೃತರಾದವರ ಸಂಖ್ಯೆ 488. ಹಾಗಾದರೆ ಈ ವರೆಗೆ ಕೊರೋನಾದದಿಂದ ಮೃತರಾದವರ ಸಂಖ್ಯೆ 1,19,502. ನಿನ್ನೆಯ ದಿನ ರೋಗ ವಾಸಿಯಾದವರ ಸಂಖ್ಯೆ 63,842. ಈ ವರೆಗಿನ ಒಟ್ಟು ಸಂಖ್ಯೆ 72,01,070. ಪ್ರಸ್ತುತ 6,25,857 ಮಂದಿ ರೋಗ ತಗುಲಿದವರು ಇದ್ದಾರೆ. ರೋಗ ಗುಣವಾಗುವ ಪ್ರಮಾಣ 92.62 ಶೇಕಡ ಇದೆಯೆಂದು ಕೇಂದ್ರ ಆರೋಗ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು