ಯುಎಇ : ಭಾರತದಿಂದ ಹೋಗುವ ವಿಮಾನ ಪ್ರಯಾಣದ ಮೇಲಿನ ನಿಷೇಧದ ಅವಧಿ ಇನ್ನೊಮ್ಮೆ ವಿಸ್ತರಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಬುದಾಬಿ: ಭಾರತದಿಂದ ಯುಎಇಗೆ ಹೋಗುವ ವಿಮಾನ ಪ್ರಯಾಣಕ್ಕೆ ಹೇರಿರುವ ನಿಷೇಧದ ಅವಧಿಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಭಾರತದಲ್ಲಿ ಕೋವಿಡ್ ಹರಡುವಿಕೆಯಲ್ಲಿ ಹೇಳಿಕೊಳ್ಳುವಂಥ ಯಾವುದೇ ಇಳಿಕ ಕಂಡು ಬರದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮೊದಲು ಅನಿರ್ಧಿಷ್ಠಾವಧಿಗೆ ವಿಮಾನ ಪ್ರಯಾಣದ ಮೇಲಿನ ನಿಷೇಧ ಹೇರಿ, ಆದೇಶ ನೀಡಲಾಗಿತ್ತು. ಇದೀಗ ಅದು ಜೂನ್ 14  ಎಂದು ನಿರ್ಧರಿಸಿ, ಮುಂದೂಡಲಾಗಿದೆ ಎಂದು ಯುಎಇಯ ನಾಗರಿಕ ವಿಮಾನಯಾನ ಇಲಾಖೆಯು ಪ್ರಕಟಣೆ ಹೊರಡಿಸಿದೆ. ಇದರಿಂದಾಗಿ ಈಗಾಗಲೇ ಭಾರತದಲ್ಲಿ ಬಾಕಿಯಾಗಿರುವ ಲಕ್ಷಾಂತರ ಅನಿವಾಸಿಗಳಿಗೆ ಹೊಸ ಆತಂಕ ಎದುರಾಗಿದೆ.

ಜೊತೆಗೆ ಕಳೆದ ಹದಿನಾಲ್ಕು ದಿನಗಳೊಳಗೆ ಭಾರತದಲ್ಲಿ ತಂಗಿದವರಿಗೂ, ಹದಿನಾಲ್ಕು ದಿನಗಳೊಳಗೆ ಭಾರತದ ಮೂಲಕ ಯುಎಇ ಪ್ರವೇಶಿಸುವ ಇತರ ದೇಶದವರಿಗೂ ಯುಎಇ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ರಾಜತಾಂತ್ರಿಕರಿಗೆ, ಯುಎಇ ಪ್ರಜೆಗಳಿಗೆ ಮತ್ತು ಗೋಲ್ಡನ್ ವೀಸಾ ಹೊಂದಿರುವವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಂಥವರು ಚಾರ್ಟರ್ಡ್ ವಿಮಾನ ಅಥವಾ ಖಾಸಗೀ ವಿಮಾನಗಳ ಮೂಲಕ ಯುಎಇ ಪ್ರವೇಶಿಸಬಹುದಾಗಿದೆ. ಇಂಥವರು ಪ್ರಯಾಣಕ್ಕೆ ಸಂಬಂಧಿಸಿದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು