‘ಮಾಹಿತಿ ತಂತ್ರಜ್ಞಾನ ಮಾರ್ಗ ಸೂಚಿ 2021’ ಇಂದಿನಿಂದ ಜಾರಿ ಇನ್ನೂ ಉತ್ತರ ನೀಡದ ಟ್ವಿಟರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿ 2021 ಇಂದಿನಿಂದ ಜಾರಿಗೊಂಡಿದೆ. ನೂತನ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ ಎಂದು ಫೇಸ್ಬುಕ್, ಯೂಟ್ಯೂಬ್ ಮತ್ತು ಗೂಗಲ್ ಮೊದಲಾದ ಹಲವು ಸಂಸ್ಥೆಗಳು ಸರಕಾರಕ್ಕೆ ತಿಳಿಸಿವೆ.

ಆದರೆ ಹಿಂದಿನಿಂದಲೂ ಸರಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಟ್ವಿಟರ್ ನೂತನ ಮಾರ್ಗಸೂಚಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಸಕರಾತ್ಮಕ ಉತ್ತರ ನೀಡಿಲ್ಲ.

ನೂತನ ಮಾರ್ಗಸೂಚಿಯಂತೆ ಕಾನೂನಿಗೆ ವಿರುದ್ಧವಾದ ವಿಚಾರಗಳನ್ನು ಯಾರಾದರೂ ಪ್ರಕಟಿಸಿದರೆ, ಅದರ ಜವಾಬ್ಧಾರಿಯನ್ನು ಸಾಮಾಜಿಕ ಜಾಲತಾಣ ಸಂಸ್ಥೆಗಳೂ ಹೊರಬೇಕಿದೆ. ಜೊತೆಗೆ ತನ್ನ ಜಾಲತಾಣದಲ್ಲಿ ನಡೆಯುತ್ತಿರುವ ಅಪರಾಧಗಳ ಬಗೆಗಿನ ದೂರುಗಳನ್ನು ಪರಿಶೀಲಿಸಲು ಅಧಿಕಾರಿಯೊಬ್ಬರನ್ನು ನೇಮಿಸಬೇಕಿದೆ ಮತ್ತು ಭಾರತದ ಕಾನೂನಿಗೆ ವಿರುದ್ಧವಾದ ಅಂಶಗಳು ಕಂಡು ಬಂದರೆ ಅವುಗಳನ್ನು ತೆಗೆದು ಹಾಕಬೇಕಿದೆ. ಅಧಿಕಾರಿಯು ಸಮಯಸಮಯಕ್ಕೆ ಸರಕಾರ ಕೊಡುವ ಸೂಚನೆಗಳನ್ನು ಅನುಸರಿಸಬೇಕಿದೆ.

ಪ್ರಸ್ತುತ ಒಂದರ ಹೊರತಾಗಿ ಇನ್ನಾವುದೇ ಸಂಸ್ಥೆಗಳು ಇಂತಹ ಅಧಿಕಾರಿಯನ್ನು ನೇಮಿಸಿಕೊಂಡಿಲ್ಲ. ಹಾಗಿದ್ದರೂ ಟ್ವಿಟರ್ ಹೊರತುಪಡಿಸಿ, ಉಳಿದ ಸಂಸ್ಥೆಗಳು ನೂತನ ಕಾನೂನನ್ನು ಅನುಸರಿಸುವ ಸಾಧ್ಯತೆಗಳಿವೆ.

ನೂತನ ಕಾನೂನುಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಈಗಾಗಲೇ ಸರಕಾರವು ಎಚ್ಚರಿಸಿದೆ. ಟ್ವಿಟರ್ ಇನ್ನೂ ಉತ್ತರಿಸದೇ ಇದ್ದಲ್ಲಿ ಅದರ ವಿರುದ್ಧ ಯಾವ ರೀತಿಯ ಕ್ರಮಕೈಗೊಳ್ಳಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಠತೆ ಮೂಡಿಲ್ಲ. ಸದ್ಯ ಟ್ವಿಟರ್ ಪ್ರಿಯರು ಆತಂಕದಲ್ಲಿದ್ದಾರೆ.

ನೂತನ ನಿಯಮಗಳು ಡಿಸ್ನಿಪ್ಲಸ್ ಹಾಟ್‍ಸ್ಟಾರ್, ಅಮೇಝಾನ್ ಪ್ರೈಮ್, ನೆಟ್‍ಫ್ಲಿಕ್ಸ್ ಮೊದಲಾದಒಟಿಟಿ ವೇದಿಕೆಗಳಿಗೂ ಅನ್ವಯವಾಗುವುದು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು