ವೈದ್ಯರು ‘ಮೃತ ಪಟ್ಟಿದ್ದಾರೆ’ ಎಂದು ಖಚಿತ ಪಡಿಸಿದ ವ್ಯಕ್ತಿ ಅಂತ್ಯಕ್ರಿಯೆ ವೇಳೆ ಕಣ್ಣು ತೆರೆದು ಮಾತನಾಡಿದ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹನ್ನೊಂದು ತಜ್ಞ ವೈದ್ಯರು ‘ಮೃತ ಪಟ್ಟಿದ್ದಾರೆ’ ಎಂದು ಖಚಿತ ಪಡಿಸಿದ ಬಳಿಕವೂ ಆ ವ್ಯಕ್ತಿ ಕಣ್ಣು ತೆರೆದು ಮಾತನಾಡಿದ ಒಂದು ಕುತೂಹಲದ ಘಟನೆ ದೆಹಲಿಯಲ್ಲಿ ನಡೆದಿದೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸತೀಶ್ ಭಾರದ್ವಾಜ್ (62) ಎಂಬುವವರ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಅವರ ಬಾಯಿಗೆ ಗಂಗಾಜಲ ಹಾಕುತ್ತಿದ್ದಾಗ ಕಣ್ಣುತೆರೆದು ಮಾತನಾಡಿದ ಅಚ್ಚರಿ ಘಟನೆ ನಡೆದಿದೆ. ಇದನ್ನು ಪ್ರತ್ಯಕ್ಷವಾಗಿ ಕಂಡ ಕುಟುಂಬಿಕರಿ ಬೆಚ್ಚಿ ಬಿದ್ದಿದ್ದಾರೆ.

ಸತೀಶ್ ಭಾರದ್ವಾಜ್ ಅವರನ್ನು ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಇವರು ಮೃತಪಟ್ಟಿರುವುದಾಗಿ ಡಿ.26 ರಂದು 11 ಮಂದಿ ತಜ್ಞ ವೈದ್ಯರು ಸರ್ಟಿಫಿಕೇಟ್‌ ಕೊಟ್ಟಿದ್ದರು.

ನಂತರ ಮಧ್ಯಾಹ್ನ 3 ಗಂಟೆ ಸುಮಾರು ಅಂತ್ಯಕ್ರಿಯೆ ಮಾಡುವ ಸಂದರ್ಭದಲ್ಲಿ, ಕೊನೆಯ ವಿಧಿವಿಧಾನದಂತೆ ಅವರ ಬಾಯಿಗೆ ಗಂಗಾಜಲ ಹಾಕಲಾಗಿದೆ. ಗಂಗಾಜಲ ಬಾಯಿಗೆ ಹೋಗುತ್ತಿದ್ದಂತೆಯೇ ವೃದ್ಧ ಕಣ್ತೆರೆದು ಮಾತನಾಡಲು ಶುರು ಮಾಡಿದ್ದಾರೆ.

ಆ ಬಳಿಕ ಆಯಂಬುಲೆನ್ಸ್ ನಲ್ಲಿ ಭಾರಧ್ವಾಜ್‌ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆ ವೇಳೆ ಪರೀಕ್ಷೆ ಮಾಡಿದ ವೈದ್ಯರು ಭಾರದ್ವಾಜ್ ಅವರ ಬಿಪಿ, ಹೃದಯ ಬಡಿತ, ನಾಡಿ ಮಿಡಿತದ ವರದಿ ನಾರ್ಮಲ್ ಇದೆ, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು