ಬೆಂಗಳೂರು (13-10-2020): ಯಾವುದೇ ರೋಗದ ವಿರುದ್ಧ ಹೋರಾಡಲು ನಮ್ಮ ದೇಹವು ಯಾವಾಗಲು ಶಕ್ತವಾಗಿರಬೇಕು. ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ದೇಹಕ್ಕೆ ರೋಗಗಳು ಬರುತ್ತದೆ. ಉತ್ತಮ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡಬಹುದಾಗಿದೆ.ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ನೀವು ಯಾವ ಆಹಾರವನ್ನು ಸೇವಿಸಬೇಕು? ಇಲ್ಲಿದೆ ಮಾಹಿತಿ
ದ್ರಾಕ್ಷಿ ಹಣ್ಣು, ಕಿತ್ತಳೆ ಹಣ್ಣು,ಮೋಸಂಬಿ ಹಣ್ಣು, ನಿಂಬೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ದಿಸಲಿದೆ.
ಕೆಂಪು ದೊಣ್ಣೆ ಮೆಣಸಿನ ಕಾಯಿ, ಗೆಡ್ಡೆ ಕೋಸು, ಬೆಳ್ಳುಳ್ಳಿ, ಶುಂಠಿ ಕೂಡಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳಕ್ಕೆ ಸಹಕಾರಿಯಾಗಲಿದೆ.
ಮೊಸರು, ಬಾದಾಮಿ, ಸೂರ್ಯಕಾಂತಿ ಬೀಜ, ನಿಂಬೆ ಕಾಯಿ, ಅರಿಶಿಣ, ಗ್ರೀನ್ ಟೀ, ಪಪ್ಪಾಯಿ ಮತ್ತು ಕಿವಿಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.
ಈಗಾಗಲೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸಿ ಎಂದು ಸೂಚನೆ ನೀಡಿದೆ.ಕೋವಿಡ್ ಸಂದರ್ಭದಲ್ಲಿ ಇಂತಹ ಆಹಾರವನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ನಾವು ರಕ್ಷಣೆ ಮಾಡಬಹುದಾಗಿದೆ.