4,000ಕೋಟಿ ಸ್ಕ್ಯಾಮ್; ಐಪಿಎಸ್ ಅಧಿಕಾರಿಗಳು ಸೇರಿ ಹಲವು ಪೊಲೀಸರು ಆರೋಪಿಗಳು! ಚಾರ್ಜ್‌ಶೀಟ್ ನಲ್ಲಿ ಹೆಸರಿರುವ ಘಟಾನುಘಟಿ ಪೊಲೀಸರು ಯಾರೆಲ್ಲಾ ಗೊತ್ತಾ?

ima
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(18-10-2020): ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಲ್ಕರ್ ಮತ್ತು ಅಜಯ್ ಹಿಲೋರಿ ಸೇರಿದಂತೆ 28 ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) 4,000 ಕೋಟಿ ರೂ.ಗಳ ಐ-ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ಪ್ರಕರಣದಲ್ಲಿ ಪೂರಕ ಚಾರ್ಜ್‌ಶೀಟ್ ದಾಖಲಿಸಿದೆ ಎಂದು  ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ ಪೂರಕ ಚಾರ್ಜ್‌ಶೀಟ್‌ನಲ್ಲಿ ಸಿಬಿಐ ಈ ಪ್ರಕರಣದ ಆರೋಪಿ ಎಂದು ಐಎಂಎ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ಮತ್ತು ಬೆಂಗಳೂರು ಉತ್ತರ ಉಪ ವಿಭಾಗದ ಮಾಜಿ ಸಹಾಯಕ ಆಯುಕ್ತ ಎಲ್.ಸಿ.ನಗರಾಜ್ ಅವರನ್ನು ಹೆಸರಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಲ್ಲದೆ, ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಸಿಐಡಿ) ಇಬಿ ಶ್ರೀಧರ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸ್ಟೇಷನ್ ಹೌಸ್ ಅಧಿಕಾರಿ ಎಂ.ರಮೇಶ್, ಸಬ್ ಇನ್ಸ್‌ಪೆಕ್ಟರ್ ಪಿ ಗೌರಿಶಂಕರ್ ಅವರನ್ನು ಸಹ ಆರೋಪಿಗಳೆಂದು ಪಟ್ಟಿ ಮಾಡಲಾಗಿದೆ.

ಶ್ರೀಧರಾ ವಿಚಾರಣಾಧಿಕಾರಿಯಾಗಿದ್ದರು ಮತ್ತು ಐಎಂಎ ಗುಂಪು ಘಟಕಗಳ ಚಟುವಟಿಕೆಗಳ ಬಗ್ಗೆ ಸಿಐಡಿ ಇಒಡಬ್ಲ್ಯೂ ನಡೆಸಿದ ವಿಚಾರಣೆಯಲ್ಲಿ ನಿಂಬಲ್ಕರ್ ಇನ್ಸ್ ಪೆಕ್ಟರ್ ಜನರಲ್ ಆಗಿ ಮೇಲ್ವಿಚಾರಣಾ ಅಧಿಕಾರಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಐಎಂಎಗೆ ಬಂದ ದೂರುಗಳು ಮತ್ತು ಮಾಹಿತಿಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸದೆ ಪೊಲೀಸ್ ಅಧಿಕಾರಿಗಳು ಮುಚ್ಚಿಹಾಕಿದ್ದರು ಎಂದು ಸಿಬಿಐ ಹೇಳಿದೆ.

ಕೆಪಿಐಡಿ ಕಾಯ್ದೆ 2004 ಸೇರಿದಂತೆ ಕಾನೂನಿನಡಿಯಲ್ಲಿ ಆರೋಪಿಗಳು ಅಗತ್ಯ ಕ್ರಮ ಕೈಗೊಂಡಿಲ್ಲ, ಬದಲಿಗೆ ಕ್ಲೀನ್ ಚಿಟ್ ನೀಡಿ ದೂರುಗಳನ್ನು ಮುಚ್ಚುವಂತೆ ಶಿಫಾರಸು ಮಾಡಿದ್ದಾರೆ. ಈ ಖಾಸಗಿ ಕಂಪನಿಯು ಯಾವುದೇ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದೆ. ಈ ಕಂಪನಿಯ ಅಕ್ರಮ ಚಟುವಟಿಕೆಗಳು ಅಡೆತಡೆಯಿಲ್ಲದೆ ಮುಂದುವರಿದಿದೆ ಎಂದು ಸಿಬಿಐ ವಕ್ತಾರ ಆರ್.ಕೆ.ಗೌರ್ ಹೇಳಿದ್ದಾರೆ.

ನಾಗರಾಜ್ ಕೂಡ ಐಎಂಎ ವ್ಯವಹಾರಗಳ ಬಗ್ಗೆ ವಿಚಾರಿಸಿ ಸರಿಯಾದ ತನಿಖೆ ನಡೆಸದೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು