ಬೆಂಗಳೂರು (29-01-2021): ಬೆಂಗಳೂರು ನಗರದಲ್ಲಿ ನಿರ್ಮಿಸಿದ ಅನದೀಕೃತ ಮನೆಗಳು ಮತ್ತು ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡಲು ಬಿಬಿಎಂಪಿ ಮುಂದಾಗಿದೆ.
ಬಿಬಿಎಂಪಿ ಸರ್ವೆಯಲ್ಲಿ 1,509 ಅನಧಿಕೃತ ಧಾರ್ಮಿಕ ಕಟ್ಟಡಗಳು ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಡುಬಂದಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಸರ್ವೆ ನಡೆಸಲಾಗಿದೆ.
2009ರ ಸೆಪ್ಟೆಂಬರ್ 29ರ ಬಳಿಕ 214 ಧಾರ್ಮಿಕ ಕಟ್ಟಡಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದ ಬಿಬಿಎಂಪಿ ಇವುಗಳನ್ನು ಕೆಡವಲು ನಿರ್ಧರಿಸಿದೆ.