ಚೆನ್ನೈ(14-12-2020) ಐಐಟಿ-ಮದ್ರಾಸ್ ವಿದ್ಯಾ ಸಂಸ್ಥೆಯಲ್ಲಿ ಕೊರೋನಾ ಹರಡಿದ ಪರಿಣಾಮವಾಗಿ ಕ್ಯಾಂಪಸಿನಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಈ ವರೆಗೆ ಸುಮಾರು ನೂರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ ಎಪ್ಪತ್ತರಷ್ಟು ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಜೊತೆಗೆ ಅಧ್ಯಾಪಕರೂ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳಿಗೂ ಕೋವಿಡ್ ತಗುಲಿರುವುದು ದೃಢಪಟ್ಟಿದೆ.
ಸಂಸ್ಥೆಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಕೋವಿಡ್ ತಪಾಸಣೆಗೆ ಒಳಪಡಿಸಲು ತಮಿಳು ಸರಕಾರವು ಆದೇಶ ನೀಡಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಅವರವರ ಕೋಣೆಗಳಿಗೆ ಆಹಾರ ಮುಟ್ಟಿಸುವಂತೆ ವ್ಯವಸ್ಥೆಗೊಳಿಸಲಾಗಿದ್ದು, ಅವರನ್ನು ಕ್ವಾರಂಟೈನಿಗೆ ಒಳಪಡಿಸಲಾಗಿದೆ.
ಸಂಸ್ಥೆಗೆ ಮರಳುತ್ತಿರುವ ವಿದ್ಯಾರ್ಥಿಗಳಿಗೂ ಎರಡು ವಾರಗಳ ಕ್ಚಾರಂಟೈನ್ ಅವಧಿಯನ್ನು ಪೂರ್ತಿಗೊಳಿಸಬೇಕೆಂಬ ನಿಯಮ ಮಾಡಲಾಗಿದೆ. ಈ ಮೊದಲು ಸಂಸ್ಥೆಯ ಹಾಸ್ಟೆಲಿನ ಉಪಹಾರ ಸ್ಥಳವನ್ನು ಮುಕ್ತವಾಗಿ ತೆರೆದಿರುವುದೇ ಕೊರೋನಾ ಹರಡಲು ಕಾರಣವೆಂದು ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಂಕು ದೃಢಪಟ್ಟ ವಿದ್ಯಾರ್ಥಿಗಳ ಆರೋಗ್ಯವು ಸ್ಥಿರವಾಗಿದೆಯೆಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.